ರಾಷ್ಟ್ರೀಯ

ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ‘ರಾಷ್ಟ್ರಗೀತೆ’ ಕಡ್ಡಾಯ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Pinterest LinkedIn Tumblr

indian-flag

ನವದೆಹಲಿ: ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಮತ್ತು ಪರದೆಯಲ್ಲಿ ರಾಷ್ಟ್ರಧ್ವಜ ಮೂಡಿಬರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ರಾಷ್ಟ್ರಗೀತೆ ನುಡಿಸುವಾಗ ಚಿತ್ರಮಂದಿರದಲ್ಲಿ ಉಪಸ್ಥಿತರಿರುವ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಬುಧವಾರ ಆದೇಶ ಹೊರಡಿಸಿರುವ ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್ ಆದೇಶದ ಸುತ್ತೋಲೆಯನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿದೆ.  ಅದೇ ವೇಳೆ ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಈ ಆದೇಶವನ್ನು ಪ್ರಕಟಿಸಲು ಕೋರಿದೆ.

ರಾಷ್ಟ್ರಗೀತೆಯನ್ನು ಬೇರೆ ಯಾವುದೇ ಧಾಟಿಯಲ್ಲಿ ನುಡಿಸುವಂತಿಲ್ಲ. ಇನ್ನಿತರ ವಿಷಯಗಳಲ್ಲಿ ಅಂದರೆ ವಿಶೇಷವಾಗಿ ವಾಣಿಜ್ಯ ಜಾಹೀರಾತುಗಳಲ್ಲಿ ರಾಷ್ಟ್ರಗೀತೆಯನ್ನು ಬಳಸಬಾರದು ಎಂದು ಸುಪ್ರೀಂ ತಾಕೀತು ನೀಡಿದೆ.

Comments are closed.