
ಬಹುನಿರೀಕ್ಷಿತ “ಅಲ್ ಮುಝೈನ್ ವೈಟ್ ಶ್ಟೋನ್ ಎಂಪಿಎಲ್” ಕ್ರಿಕೆಟ್ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮ ಪಣಂಬೂರು ಬೀಚ್ ನಲ್ಲಿ ಬಹಳ ಅದ್ದೂರಿಯಿಂದ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಆಕರ್ಷಕ ಬೈಕ್ ರ್ಯಾಲಿಗೆ ಶಾಸಕ ಮೊಯ್ದಿನ್ ಬಾವ ಮತ್ತು ಯು.ಟಿ ಇಫ್ತಿಕಾರ್, ಸುಹೈಬ್ ವೈಟ್ ಶ್ಟೋನ್ ಚಾಲನೆ ನೀಡಿದರು. ನೆಹರು ಮೈದಾನದಿಂದ ಆರಂಭವಾದ ಪಣಂಬೂರು ಬೀಚ್‍ನಲ್ಲಿ ಸಮಾಪ್ತಿಗೊಂಡಿತು.






ಬೈಕ್ ರ್ಯಾಲಿಗೆ ಚಾಲನೆ ನೀಡಿದ ಶಾಸಕ ಮೊಯ್ದಿನ್ ಬಾವ ಮಾತನಾಡಿ, ಕಳೆದ ವರ್ಷ ಸಿರಾಜುದ್ದೀನ್ ಹಾಗೂ ಇಮ್ತಿಯಾಝ್ ಸಂಘಟಿಸಿದ್ದ ಎಂಪಿಎಲ್ ಯಶಸ್ವಿಯಾಗಿತ್ತು. ಎರಡನೆ ವರ್ಷದ ಈ ಬಾರಿಯ ಎಂಪಿಎಲ್ ಮತ್ತಷ್ಟು ಜನಪ್ರಿಯವಾಗುತ್ತಿದ್ದು, ಸ್ಥಳೀಯ ಕ್ರಿಕೆಟಿಗರು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ಈ ಕ್ರೀಡಾಕೂಟ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂಧರ್ಬದಲ್ಲಿ ಮಣಿಪಾಲದ ಗ್ರೀನ್ಸ್ ನಿಂದ ಪಣಂಬೂರು ಬೀಚ್ ವರಗೆ ಮನಮೋಹಕ ಸೈಕ್ಲಿಂಗ್ ರ್ಯಾಲಿ ಕಾರ್ಯಕ್ರಮದ ಆಕರ್ಷಕಣೆಯನ್ನು ಇನ್ನಷ್ಟು ಹೆಚ್ಚಿಸಿತು.
ಮಕ್ಕಳಿಗೆ ವಿವಿಧ ಮನೋರಂಜಕ ಸ್ಫರ್ಧೆ, ಟೀಮ್ ಮಂಗಳೂರ್ ತಂಡದಿಂದ ಗಾಳಿಪಟ ಪ್ರದರ್ಶನ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ತಂಡದಿಂದ ನೃತ್ಯ ಪ್ರದರ್ಶನ, ಎಂಪಿಎಲ್ ನಲ್ಲಿ ಭಾಗವಹಿಸುವ ತಂಡದ ಸದಸ್ಯರ ಫ್ಯಾಷನ್ ಶೋ ಸಮಾರಂಭದ ಮೆರುಗು ಹೆಚ್ಚಿಸಿತು. ಕರಾವಳಿಯ ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಂಪಿಎಲ್ ಚೇರ್‌ಮೆನ್ ಸಿರಾಜುದ್ದೀನ್ “ನಮ್ಮ ಮುಖ್ಯ ಪ್ರಾಯೋಜಕರು, ಸಲಹೆಗಾರರೂ, ಯುವಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅನಿವಾಸಿ ಉದ್ಯಮಿಗಳಾದ ಝಕಾರಿಯಾ ಜೋಕಟ್ಟೆ ಮತ್ತು ಶರೀಫ್ ರವರು ಕಾರಣಾಂತರದಿಂದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿಲಾಗಲಿಲ್ಲ, ಎಂಪಿಎಲ್ ಯಶಸ್ವಿಯಾಗಲು ಇವರಿಬ್ಬರ ಕೊಡುಗೆ ಮಹತ್ತರವಾದದ್ದು, ಇವರ ಅನುಪಸ್ಥಿತಿಯಲ್ಲಿ ಶರೀಫ್ ರವರ ಮಗ ಸುಹೈಬ್ ಉದ್ಘಾಟನಾ ಸಮಾರಂಭದಲ್ಲಿ ನಮ್ಮೊಂದಿಗಿರುವುದು ಖುಷಿಯ ವಿಚಾರ” ಎಂದರು.
ಎಂಪಿಎಲ್ ಕನ್ವೀನರ್ ಇಮ್ತಿಯಾಝ್, ಮನೋಹರ್ ಅಮೀನ್, ಕೋಸ್ಟಲ್ ವುಡ್ ಸ್ಟಾರ್ ಅರ್ಜುನ್ ಕಾಪಿಕಾಡ್, ಯಶ್ಪಾಲ್ ಸುವರ್ಣ ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
Comments are closed.