ರಾಷ್ಟ್ರೀಯ

ತಿರುಪತಿ: ಔಷಧಿಗೆ ದುಡ್ಡಿಲ್ಲದೆ ಮಹಿಳೆ ಸಾವು

Pinterest LinkedIn Tumblr

noteಕಡಪ: ನೋಟು ಹಿಂಪಡೆತ ನಿರ್ಧಾರದಿಂದ ಸರಿಯಾದ ಸಮಯಕ್ಕೆ ನಗದು ಮತ್ತು ಚಿಲ್ಲರೆ ಪಡೆಯಲು ವಿಫಲರಾದದ್ದರಿಂದ ಚಿಕಿತ್ಸೆಗಾಗಿ ಔಷಧ ಪಡೆಯಲು ಸಾಧ್ಯವಾಗದೆ ರೈಲ್ವೆ ಕೋಡುವಿನಲ್ಲಿ ೫೫ ವರ್ಷದ ಮಹಿಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರು ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಔಷದಿ ಕೊಳ್ಳಲು ಚಿಲ್ಲರೆ ಸಿಗಲಿಲ್ಲ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಸಂತ್ರಸ್ತೆಯ ಪುತ್ರ ಪಿ ಪ್ರಸಾದ್ ಹೇಳುವಂತೆ, ಅವರ ತಾಯಿ ಪಿ ರಮಣಮ್ಮ ಅವರಿಗೆ ಶುಕ್ರವಾರ ಬೆಳಗ್ಗೆ ಹೃದಯಾಘಾತವಾಗಿದೆ ಮತ್ತು ಅವರನ್ನು ತಿರುಪತಿಯ ಎಸ್ ವಿ ಐ ಎಂ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅವರನ್ನು ರುಯಾ ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಕುಟುಂಬ ೪೦೦೦ ರೂ ಅನ್ನು ಬ್ಯಾಂಕ್ ನಿಂದ ಬದಲಾವಣೆ ಮಾಡಿ ಪಡೆದುಕೊಂಡರೂ, ಮೊದಲ ಸುತ್ತಿನ ಔಷದಿ ಮತ್ತು ಪ್ರಯಾಣಕ್ಕೆ ಅದು ಖರ್ಚಾಗಿದೆ. ರಮಣಮ್ಮ ಅವರ ಪರಿಸ್ಥಿತಿ ಗಂಭೀರವಾದಾಗ ಇನ್ನಷ್ಟು ಔಷಧಗಳನ್ನು ಕೂಡಲೇ ತರುವಂತೆ ಕುಟುಂಬ ಸದಸ್ಯರಿಗೆ ವೈದ್ಯರು ಹೇಳಿದ್ದಾರೆ.
“ನಾನು ರುಯಾ ಆಸ್ಪತ್ರೆಯ ಔಷಧಾಲಯದಲ್ಲಿ ಕೆಲವು ಔಷಧಗಳನ್ನು ಕೊಂಡೆ ಆದರೆ ಅಲ್ಲಿ ಒಂದಷ್ಟು ಸಿಗಲಿಲ್ಲವಾದ್ದರಿಂದ ಆಸ್ಪತ್ರೆ ಹೊರಗಿದ್ದ ಔಷಧಾಲಯಗಳ ಮೊರೆ ಹೋಗಬೇಕಾಯಿತು. ಅಲ್ಲಿ ಅವರು ಹಳೆ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು.
“ನಂತರ ನನ್ನ ಗೆಳೆಯರು ಕೆಲವು ಹೊಸ ನೋಟುಗಳನ್ನು ಒದಗಿಸಲು ಸಹಾಯ ಮಾಡಿದ ಮೇಲೆ ಔಷಧಿಗಳನ್ನು ಕೊಂಡು ಹೋದೆ. ಆದರೆ ಸಮಯ ಮೀರಿತ್ತು. ಸರಿಯಾದ ಸಮಯಕ್ಕೆ ಔಷದಗಳನ್ನು ತಲುಪಿಸಲು ಸಾಧ್ಯವಾಗದೆ ಹೋಗಿದ್ದಕ್ಕೆ ನನ್ನ ತಾಯಿ ಕೊನೆಯುಸಿರೆಳೆದಿದ್ದರು” ಎಂದು ಪ್ರಸಾದ್ ಹೇಳಿದ್ದಾರೆ.

Comments are closed.