ರಾಷ್ಟ್ರೀಯ

ಕೌಟುಂಬಿಕ ದೌರ್ಜನ್ಯ ಆರೋಪ; ಶೀಲಾ ದೀಕ್ಷಿತ್‍ರ ಅಳಿಯ ಬಂಧನ

Pinterest LinkedIn Tumblr

Shiela_Dikshitನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಳಿಯನನ್ನು ಕೌಟುಂಬಿಕ ದೌರ್ಜನ್ಯ ಆರೋಪದಡಿಯಲ್ಲಿ ಬಂಧಿಸಲಾಗಿದೆ.

ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಶೀಲಾ ಅವರ ಅಳಿಯ ಇಮ್ರಾನ್‍ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಕೆಲವು ದಿನಗಳ ಹಿಂದೆ ಇಮ್ರಾನ್ ಪತ್ನಿ ಲತಿಕಾ ಬಾರಾಕಂಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಕೌಟುಂಬಿಕ ದೌರ್ಜನ್ಯ ಆರೋಪದ ಮೇರೆಗೆ ಇಮ್ರಾನ್ ಅವರನ್ನು ಬಂಧಿಸಿದ್ದು, ದೆಹಲಿಗೆ ಕರೆದುಕೊಂಡು ಹೋಗಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ 10 ತಿಂಗಳಿನಿಂದ ಶೀಲಾ ಅವರ ಪುತ್ರಿ ಲತಿಕಾ ಮತ್ತು ಇಮ್ರಾನ್ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

Comments are closed.