
ಬಿಗ್‌ಬಾಸ್‌ಮನೆ ಮತ್ತೆ ಗೊಂದಲದ ಗೂಡಾಗಿದೆ. ಶಾಲಿನಿ-ಶೀತಲ್ ಮನೆಯಿಂದ ಹೊರಗೆ ಇದ್ದು, ಸೀಕ್ರೆಟ್ ರೂಮಿನಲ್ಲಿ ಮನೆಯಲ್ಲಿನ ಎಲ್ಲ ಆಟಗಳನ್ನು ನೋಡುತ್ತಿದ್ದಾರೆ. ಈ ಮಧ್ಯೆ ಸೋಮವಾರ ಮತ್ತೆ 4 ಮಂದಿ ನಾಮಿನೇಟ್ ಆಗಿದ್ದಾರೆ. ಎಂದಿನ ವಾರದಂತೆ ಪ್ರಥಮ್ ಮೊದಲಿಗನಾಗಿದ್ದು, ಓಂ ಪ್ರಕಾಶ್, ಕಾವ್ಯ ಹಾಗೂ ನಿರಂಜನ್‌ಹೊರಗೆ ಹೋಗುವ ರೇಸ್ ನಲ್ಲಿದ್ದಾರೆ.
ಈ ವಾರದ ಕ್ಯಾಪ್ಟನ್‌ಗಿರಿಗಾಗಿ ಬಿಗ್‌ಬಾಸ್‌ನೀಡಿದ್ದ ಹಗ್ಗ ಬಿಡಿಸುವ ಟಾಸ್ಕ್‌ನಲ್ಲಿ ಮೋಹನ್‌ವಿಜೇತರಾಗಿದ್ದು, ಅವರು ಕ್ಯಾಪ್ಟನ್‌ಆದರೂ. ಕ್ಯಾಪ್ಟನ್‌ಗೆ ನಾಮಿನೇಶನ್‌ಪ್ರಕ್ರಿಯೆಯಿಂದ ಒಬ್ಬರನ್ನು ರಕ್ಷಿಸುವ ಅಧಿಕಾರ ಕೊಟ್ಟಾಗ ಮೋಹನ್ ಅವರು ಮಾಳವಿಕರನ್ನು ರಕ್ಷಿಸಿದರು. ಹಾಗಾಗಿ ಈ ವಾರದ ಎಲಿಮೆನೇಶನ್‌ನಿಂದ ಮಾಳವಿಕ ಸೇಫ್‌ಆಗಿದ್ದಾರೆ.
ಪ್ರಥಮ್, ಓಂ ಪ್ರಕಾಶ್, ಕಾವ್ಯ ಹಾಗೂ ನಿರಂಜನ್‌ಈ ವಾರದ ನಾಮಿನೇಶನ್‌ಲಿಸ್ಟ್‌ನಲ್ಲಿದ್ದಾರೆ. ಈ ವಾರ ಯಾರು ಹೊರ ಹೋಗುತ್ತಾರೆ ಎಂಬುದನ್ನು ಕಾಡು ನೋಡಬೇಕಾಗಿದೆ.
Comments are closed.