ಕರ್ನಾಟಕ

ಟಿಪ್ಪು ಜಯಂತಿ ಸರ್ಕಾರಕ್ಕೆ ಬಿಟ್ಟಿದ್ದು : ಹೈಕೋರ್ಟ್

Pinterest LinkedIn Tumblr

high-courtಬೆಂಗಳೂರು(ನ.3): ಟಿಪ್ಪು ಜಯಂತಿ ಆಚರಣೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್, ಕಾರ್ಯಾಂಗದ ನಿರ್ಧಾರದಲ್ಲಿ ನ್ಯಾಯಾಂಗ ತಲೆ ಹಾಕಲ್ಲ ಎಂದಿದೆ.

ಇದೇ ವೇಳೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ಸೂಚನೆ ನೀಡಿದೆ. ಕೊಡಗು ಮೂಲದ ಕೆ.ಪಿ ಮಂಜುನಾಥ್ ಎಂಬಾತ ಟಿಪ್ಪು ಜಯಂತಿ ಆಚರಣೆ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಟಿಪ್ಪು ಜಯಂತಿ ಸರ್ಕಾರ ನಿರ್ಧಾರ ಆಗಿರುವುದರಿಂದ ಸರ್ಕಾರದ ಮುಂದೆ ಮನವಿ ಮಾಡಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ಸರ್ಕಾರ ಮನವಿ ಪುರಸ್ಕರಿಸುವಂತೆ ಸೂಚಿಸಿದೆ. ಅಲ್ಲದೆ, ಟಿಪ್ಪು ಜಯಂತಿ ಆಚರಣೆ ನವೆಂಬರ್ 10 ಮತ್ತು 11 ರಂದು ಹಮ್ಮಿಕೊಂಡಿರುವುದರಿಂದ 8ನೇ ತಾರೀಕ್ ಮುಖ್ಯ ನ್ಯಾಯಮೂರ್ತಿ ನಿಲುವು ತಿಳಿಸುವಂತೆ ಸೂಚಿಸಿದೆ.

Comments are closed.