ಬೆಂಗಳೂರು: ಫಿಲಿಪ್ಪೀನ್ಸ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮಿಸ್ಟರ್ ಏಷ್ಯಾ ಆಗಿ ಹೊರಹೊಮ್ಮಿದ ರಾಜ್ಯದ ಜಿ.ಬಾಲಕೃಷ್ಣ ಮುಂದಿನ ಸ್ಪರ್ಧೆಗಳಿಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ವೈಟ್‌ಫೀಲ್ಡ್‌ನ ಅರ್ನಾಲ್ಡ್ ಶ್ವಾಜೆನ್ಗರ್ ಎಂದೇ ಹೆಸರಾಗಿರುವ ಬಾಲಕೃಷ್ಣ, ಮಿ.ಏಷ್ಯಾ ಜತೆಗೆ ಜರ್ಮನಿಯಲ್ಲಿ ಮಿ.ಯೂನಿವರ್ಸ್ ಜೂನಿಯರ್ ಹಾಗೂ ಗ್ರೀಸ್‌ನಲ್ಲಿ ಮಿ.ವರ್ಡ್ ಪಟ್ಟ ಪಡೆದಿದ್ದರು. ಮುಂಬರುವ ಮಿ.ಯೂನಿವರ್ಸ್ ಸ್ಪರ್ಧೆಯು ಜರ್ಮನಿಯಲ್ಲಿ ನಿಗದಿಯಾಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರ್ಥಿಕ ನೆರವಿನ ಅಗತ್ಯವಿದೆ ಎನ್ನುತ್ತಾರೆ ದೇಹದಾರ್ಢ್ಯ ಪಟು ಬಾಲಕೃಷ್ಣ.
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಬಾಲಕೃಷ್ಣ ಬಡತನದಲ್ಲಿಯೇ ಬೆಳೆದವರು. ಜಿಮ್ ತರಬೇತುದಾರರಾಗಿರುವ ಇವರು ಹೆಚ್ಚಿನ ಆದಾಯಕ್ಕಾಗಿ ನೀರಿನ ಟ್ಯಾಂಕರ್ ಚಾಲಕನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿತ್ಯ 6 ತಾಸು ಕಸರತ್ತು
ಕೆಲಸದ ಒತ್ತಡದ ನಡುವೆಯೂ ನಿತ್ಯ ಕನಿಷ್ಠ 6 ತಾಸು ಕಸರತ್ತು ನಡೆಸುತ್ತಾರೆ. ಕಸರತ್ತಿನ ಜತೆಗೆ ದೇಹಕ್ಕೆ ಅಗತ್ಯ ಪೌಷ್ಠಿಕಾಂಶಗಳಿಗಾಗಿ ಸೂಕ್ತ ಆಹಾರ ತೆಗೆದುಕೊಳ್ಳಲು ಹೆಚ್ಚು ಖರ್ಚಾಗುತ್ತದೆ.
ಇವರು ಪ್ರತಿ ದಿನ ಸೇವಿಸುವ ಆಹಾರದ ಪ್ರಮಾಣ:
* ಚಿಕನ್– 750 ಗ್ರಾಂ
* ಮೊಟ್ಟೆ– 25
* ಅನ್ನ– 300 ಗ್ರಾಂ
* ತರಕಾರಿ– 200 ಗ್ರಾಂ
* ಮೀನು ಮತ್ತು ಹಣ್ಣು
ಫಿಟ್‌ನೆಸ್ ಕಾಯ್ದುಕೊಳ್ಳುವುದಕ್ಕಾಗಿಯೇ ತಿಂಗಳಿಗೆ ₹1 ಲಕ್ಷ ಖರ್ಚಾಗುತ್ತಿದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಲು ₹3–4 ಲಕ್ಷ ವ್ಯಯಿಸಬೇಕಾಗುತ್ತದೆ.
Comments are closed.