
ದುಬೈ: ದುಬಾಯಿ ಇನ್ವೆಸ್ಟ್ಮೆಂಟ್ ಪಾರ್ಕ್ ಬಳಿ ಬುಧವಾರ (ಇಂದು) ಉದ್ಘಾಟನೆಗೊಳ್ಳಲಿರುವ ಪ್ರವೀಣ್ ಶೆಟ್ಟಿ ಮಾಲಕತ್ವದ ಫೋರ್ಚುನ್ ಪಾರ್ಕ್ ಹೋಟೆಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.




ರಘುರಾಜ ಭಟ್ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಫಾರ್ಚೂನ್ ಗ್ರೂಪ್ ಆಪ್ ಹೋಟೆಲ್ಸ್ ನ 8ನೇ ಸುಸಜ್ಜಿತ ವಿಶ್ವದರ್ಜೆಯ ” ಫಾರ್ಚೂನ್ ಪಾರ್ಕ್ ಹೋಟೆಲ್” ಇದಾಗಿದೆ. ಲಕ್ಷ್ಮಿ ಪೂಜೆಯಲ್ಲಿ ಪ್ರವೀಣ್ ಶೆಟ್ಟಿ ಹಾಗು ಅವರ ಧರ್ಮ ಪತ್ನಿ ರೂಪಾಲಿ ಶೆಟ್ಟಿ ಭಾಗವಹಿಸಿದ್ದರು. ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ದುಬೈಯ ಸುಂದರ ತಾಣದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ತಲೆ ಎತ್ತಿ ನಿಂತಿರುವ ಫಾರ್ಚೂನ್ ಪಾರ್ಕ್ ಹೋಟೆಲ್ ವಕ್ವಾಡಿ ಪ್ರವೀಣ್ ಶೆಟ್ಟಿಯವರ ಕನಸಿನ ಕಲ್ಪನೆಯ ಸೌಧವಾಗಿದೆ.








































Comments are closed.