ರಾಷ್ಟ್ರೀಯ

‘ತಲಾಖ್’ ತಿರಸ್ಕರಿಸಿ ಕೋರ್ಟ್ ಮೆಟ್ಟಿಲೇರಿದ ಯುವತಿ

Pinterest LinkedIn Tumblr

talakಪುಣೆ(ಅ.22): ತ್ರಿವಳಿ ತಲಾಖ್ ಬಗ್ಗೆ ದೇಶದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ 18 ವರ್ಷದ ಮುಸ್ಲಿಂ ಮಹಿಳೆ ಆರ್ಶಿಯಾ ಬಗ್ವಾನ್ ಎಂಬುವರು ತಮ್ಮ ಪತಿ ನೀಡಿದ್ದ ‘ತ್ರಿವಳಿ ತಲಾಖ್’ ತಿರಸ್ಕರಿಸಿದ್ದು, ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಪುಣೆಯ ಮುಸ್ಲಿಂ ಸತ್ಯಶೋಧಕ ಮಂಡಲ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಶಿಯಾ, ನಿರಂಕುಶವಾಗಿ ವಿಚ್ಛೇದನ ನೀಡುವುದನ್ನು ವಿರೋಧಿಸುವುದಾಗಿ ಹೇಳಿದರು.
ಇದನ್ನು ಪ್ರಶ್ನಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಲು ಅವರು ನಿರ್ಧರಿಸಿದ್ದಾರೆ.

Comments are closed.