ರಾಷ್ಟ್ರೀಯ

ವಿವಿಧ ಬ್ಯಾಂಕ್‍ಗಳ 30 ಲಕ್ಷ ಎಟಿಎಂ ಕಾರ್ಡ್ ಬ್ಲಾಕ್!

Pinterest LinkedIn Tumblr

atmcard

ನವದೆಹಲಿ: ದೇಶದ ವಿವಿಧ ಬ್ಯಾಂಕ್‍ಗಳು 30 ಲಕ್ಷ ಎಟಿಎಂ ಕಾರ್ಡ್‍ಗಳನ್ನು ಕ್ಲೋಸ್ ಮಾಡಿವೆ. ಈ ಎಲ್ಲಾ ಕಾರ್ಡ್‍ಗಳ ನಂಬರ್ ಹಾಗೂ ಪಿನ್ ನಂಬರ್ ಬಹಿರಂಗವಾಗಿದೆ ಎನ್ನುವ ದೂರು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 6 ಲಕ್ಷ ಗ್ರಾಹಕರಿಗೆ ಹೊಸದಾಗಿ ಡೆಬಿಟ್ ಕಾರ್ಡ್ ಮರು ವಿತರಣೆ ಮಾಡಲು ಮುಂದಾಗಿದೆ. ಉಳಿದ ಬ್ಯಾಂಕ್‍ಗಳು ಕೂಡ ಆದಷ್ಟು ಬೇಗ ನಿಮ್ಮ ಎಟಿಎಂ ಕಾರ್ಡ್‍ನ ಪಿನ್ ನಂಬರ್ ಬದಲಾವಣೆ ಮಾಡಿ ಎಂದು ಗ್ರಾಹಕರಿಗೆ ಸೂಚನೆ ನೀಡಿದೆ. ಪಿನ್ ಬಳಸದೇ ಅಂತಾರಾಷ್ಟ್ರೀಯ ವ್ಯವಹಾರ ನಡೆಸುವುದನ್ನು ಬ್ಯಾಂಕ್‍ಗಳು ಬ್ಲಾಕ್ ಮಾಡಿದೆ.

ಹಿಟಾಚಿ ಪೇಮೆಂಟ್ ಸರ್ವಿಸ್‍ನಿಂದ ಈ ಸಮಸ್ಯೆ ಸೃಷ್ಟಿಯಾಗಿದ್ದು, ಯಸ್ ಬ್ಯಾಂಕ್ ಎಟಿಎಂ ನಿರ್ವಹಣೆಯನ್ನು ಹಿಟಾಚಿ ಪೇಮೆಂಟ್ ಸರ್ವಿಸ್ ನೋಡಿಕೊಳ್ಳುತ್ತಿದೆ. ಯಸ್ ಬ್ಯಾಂಕ್ ಎಟಿಎಂ ಬಳಕೆಯಿಂದಾಗಿ ಹಲವು ಬ್ಯಾಂಕ್‍ಗಳ ಗ್ರಾಹಕರ ಎಟಿಎಂ ಪಿನ್ ಬಹಿರಂಗವಾಗಿದೆ. ಜುಲೈನಲ್ಲಿ ಹಲವು ಗ್ರಾಹಕರು ಬ್ಯಾಂಕ್‍ಗಳಿಗೆ ದೂರು ನೀಡಿದಾಗ ಬಹಿರಂಗವಾಗಿರುವ ವಿಚಾರ ಬೆಳಕಿಗೆ ಬಂದಿತ್ತು.

ಯಸ್ ಬ್ಯಾಂಕ್, ಎಸ್‍ಬಿಐ, ಎಚ್‍ಡಿಎಫ್‍ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್‍ನ ಹೆಚ್ಚು ಸಂಖ್ಯೆಯ ಗ್ರಾಹಕರ ಪಿನ್ ಬಹಿರಂಗವಾಗಿದೆ. ಆರ್‍ಬಿಐ ಮಾಹಿತಿಗಳ ಪ್ರಕಾರ ದೇಶದಲ್ಲಿ ಸುಮಾರು 60 ಕೋಟಿ ಮಂದಿ ಡೆಬಿಟ್ ಕಾರ್ಡನ್ನು ಬಳಸುತ್ತಿದ್ದಾರೆ.

Comments are closed.