
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸೀಮಿತ ದಾಳಿಯ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ವಿಜಯ ದಶಮಿ ದೇಶಕ್ಕೆ ಅತಿ ವಿಶೇಷವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಸೇನೆ ಯಾವುದೇ ಸಮಸ್ಯೆ ಎದುರಿಸಲು ಸಮರ್ಥವಾಗಿದೆ ಎಂದು ಹೇಳಿದರು.
ಭಾರತ ದೇಶ ಸಮರ್ಥವಾಗಲು ಬಯಸಿ ಸೇನೆ ನಿರಂತರ ಅಭ್ಯಾಸ ನಡೆಸುತ್ತಿರುತ್ತದೆ. ಇದರಿಂದ ನೆರೆಹೊರೆಯ ದೇಶಗಳು ಚಿಂತಿಸುವುದು ಅನಾವಶ್ಯಕ ಎಂದು ಹೇಳಿದರು.
ಮುಂದಿನ ದಿನಗಳಲ್ಲೂ ನಾವು ವಿಜಯ ದಶಮಿಯನ್ನು ಆಚರಿಸುತ್ತೇವೆ, ಆದರೆ ಈ ವರ್ಷದ ವಿಜಯ ದಶಮಿ ತುಂಬಾ ವಿಶೇಷವಾದದ್ದು ಎಂದು ಸಂತಸ ವ್ಯಕ್ತ ಪಡಿಸಿದರು.
ದೇಶದ ಸೇನಾ ಪಡೆ ತುಂಬಾ ಸಮರ್ಥವಾಗಿರಬೇಕು. ಹೀಗಿದ್ದಾಗ ಮಾತ್ರ ದೇಶವು ಶಕ್ತಿಯುತವಾಗಿರುತ್ತದೆ. ನನ್ನ ಆರೋಗ್ಯಕ್ಕಾಗಿ ಹಾಗೂ ನನ್ನ ಶಕ್ತಿಯನ್ನು ವೃದ್ದಿಸಿಕೊಳ್ಳಲು ನಾನು ವ್ಯಾಯಾಮ ಮಾಡುತ್ತೇನೆ, ನನ್ನ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತೇನೆ, ಇದರ ಅರ್ಥ ನಾನು ಯಾರದೋ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇನೆ ಎಂದಲ್ಲ. ಇದಕ್ಕೆ ನೆರೆಹೊರೆಯವರು ಚಿಂತಿಸುವ ಅಗತ್ಯವಿಲ್ಲ ಎಂದು ಮೋದಿ ಪಾಕಿಸ್ತಾನಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
Comments are closed.