ಕರ್ನಾಟಕ

ಕಳ್ಳನಿಂದ ಮನೆ ಮಾಲಿಕನಿಗೆ ಪತ್ರ!

Pinterest LinkedIn Tumblr

patraಬೆಂಗಳೂರು: ಒಂದು ವರ್ಷದ ಹಿಂದೆ ಕಳ್ಳನೊಬ್ಬ ಸರಗಳ್ಳತನ ಮಾಡಿ ಅದು ನಕಲಿ ಚಿನ್ನ ಅಂತ ಗೊತ್ತಾದ್ಮೇಲೆ ಕ್ಷಮೆ ಕೇಳಿ ಮನೆಯ ಮುಂದೆ ನಕಲಿ ಚಿನ್ನವನ್ನು ಇಟ್ಟು ಹೋಗಿದ್ದ. ಈಗ ಅಂತಹದ್ದೆ ಮತ್ತೊಂದು ಘಟನೆ ನಡೆದಿದೆ. ಕಳ್ಳತನ ಮಾಡಿದ್ದ ವ್ಯಕ್ತಿಯೊಬ್ಬ ಮನೆ ಮಾಲೀಕರಿಗೆ ಪತ್ರ ಬರೆದಿದ್ದಾನೆ.

ತ್ಯಾಗರಾಜನಗರದ ಲಕ್ಷ್ಮಮ್ಮ ಎಂಬವರ ಮನೆಯಲ್ಲಿ ಎರಡು ತಿಂಗಳ ಹಿಂದೆ 250 ಗ್ರಾಂ ಚಿನ್ನ ಮತ್ತು ಬಟ್ಟೆಗಳನ್ನ ಕಳವು ಮಾಡಿ ಕಳ್ಳರು ಪರಾರಿಯಾಗಿದ್ರು. ಮನೆಯಲ್ಲಿ ಕಳ್ಳತನವಾಗಿದ್ದನ್ನು ನೋಡಿ ಗಾಬರಿಯಾಗಿದ್ದ ಲಕ್ಷ್ಮಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಲಕ್ಷ್ಮಮ್ಮ ಮನೆಯ ಮುಂದೆ ಕಳುವಾಗಿದ್ದ ಬಟ್ಟೆ ಪತ್ತೆಯಾಗಿದ್ದವು. ಬಟ್ಟೆಯ ಜೊತೆ ಒಂದು ಪತ್ರವೂ ಪತ್ತೆಯಾಗಿತ್ತು. ನಿಮ್ಮ ಮನೆಯಲ್ಲಿ ನಾನು ಕಳ್ಳತನ ಮಾಡಿದ್ದೆ. ನನ್ನ ಬಳಿ ಈಗ ಕೇವಲ ಬಟ್ಟೆಗಳು ಮಾತ್ರ ಇವೆ. ನಿಮ್ಮ ಸಂಬಂಧಿಯ ಮನೆಯಲ್ಲೇ ಚಿನ್ನಾಭರಣ ಇದೆ ಅಂತ ಪತ್ರದಲ್ಲಿ ಹೇಳಲಾಗಿತ್ತು.

ಪತ್ರ ನೋಡಿದ ಕೂಡಲೇ ಲಕ್ಷ್ಮಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರ ಮನೆಯಲ್ಲೇ ಚಿನ್ನ ಇದೆ ಹೋಗಿ ಹುಡುಕಿ ಅಂತ ಪತ್ರ ಬರೆದಿರುವುದರಿಂದ ಪೊಲೀಸರು ಹುಡುಕಾಟ ನಡೆಸಿದ್ರು. ಆದ್ರೆ ಅವರು ಈ ಕೆಲಸದಲ್ಲಿ ಸಕ್ಸಸ್ ಆಗ್ಲೇ ಇಲ್ಲ. ಹದಿನೈದು ದಿನಗಳ ನಂತರ ಮತ್ತೊಂದು ಪತ್ರ ಬಂದಿದ್ದು, ನಿಮ್ಮ ಸಂಬಂಧಿಗಳು ಹಣ ನೀಡಿದ್ದಾರೆ ಆದ್ದರಿಂದ ಪೊಲೀಸರು ಅವರನ್ನ ಬಂಧಿಸಿಲ್ಲ ಅಂತ ಮತ್ತೊಂದು ಪತ್ರ ಬರೆಯಲಾಗಿದೆ.

Comments are closed.