ಕರ್ನಾಟಕ

ಹೈಟೆಕ್ ವೇಶ್ಯಾವಾಟಿಕೆ: 10 ಆರೋಪಿಗಳ ಬಂಧನ

Pinterest LinkedIn Tumblr

acusedಬೆಂಗಳೂರು: ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲಾರ್ ವೊಂದರ ಮೇಲೆ ಗುರುವಾರ ದಾಳಿ ನಡೆಸಿದ ಕೇಂದ್ರ ಅಪರಾಧಿ ವಿಭಾಗ(ಸಿಸಿಬಿ)ದ ಪೊಲೀಸರು, ವಿವಿಧ ರಾಜ್ಯದ 10 ಆರೋಪಿಗಳನ್ನು ಬಂಧಿಸಿ. ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಫಿಕ್ಸ್ ಸ್ಪಾ ಆಂಡ್ ಸಲೂನ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮಸಾಜ್ ಪಾರ್ಲಾರ್ ಹೆಸರಿನಲ್ಲಿ ಬಾಡಿ ಟೂ ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್ ಎಂಬ ಲೈಂಗಿಕ ಚಟುವಟಿಕೆ ಮಾಡುತ್ತಾ ವೇಶ್ಯಾವಾಟಿಕೆ ನಡೆಸುತ್ತಿದ್ದ 10 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ಪೋರ್ಜಿತ್ ಅಲಿಯಾಸ್ ಸಂಜಿತ್, ಇಮಾನ್ಯುಯೆಲ್ ಅಲಿಯಾಸ್ ದಬರು, ಪವನ್ ಅಲಿಯಾಸ್ ಬಾಲಕೃಷ್ಣ, ಚಂದನ್ ಅಲಿಯಾಸ್ ಪಾಂಡುರಂಗ, ಸುರೇಶ್ ಅಲಿಯಾಸ್ ನಾರಾಯಣ, ವಿನೋದ್ ಅಲಿಯಾಸ್ ಕೃಷ್ಣಪ್ಪ, ಚಂದ್ರಮೋಹನ್ ಅಲಿಯಾಸ್ ಶಂಕರಪ್ಪ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 12 ಮೊಬೈಲ್ ಫೋನ್ಸ್, 15 ಸ್ಕೋರ್ ಕಂಪನಿಯ ಕಾಂಡೋಮ್ ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಪಶ್ಚಿಮ ಬಂಗಾಳದ ಇಬ್ಬರು ಹುಡುಗಿಯರು ಹಾಗೂ ಪಂಜಾಬ್ ಮತ್ತು ಮಹಾರಾಷ್ಟ್ರ ಮೂಲದ ಓರ್ವ ಹುಡುಗಿಯರನ್ನು ಪೊಲೀಸರು ರಕ್ಷಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೋಹನ್ ಎಂಬುವರು ಬೇರೆ-ಬೇರೆ ರಾಜ್ಯಗಳಿಂದ ಮಸಾಜ್ ಪಾರ್ಲರ್ ಗೆ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆಯಲ್ಲಿ ತೊಡಗಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಪುಸಲಾಯಿಸಿ ಈ ಚಟುವಟಿಕೆಯಲ್ಲಿ ದೂಡಿದ್ದಾರೆಂದು ವಿಚಾರಣೆ ವೇಳೆಯಲ್ಲಿ ಯುವತಿಯರು ಆರೋಪಿಸಿದ್ದಾರೆ.

ಈ ದಂಧೆಯ ಕಿಂಗ್ ಪಿನ್ ಮೋಹನ್ ಹಾಗೂ ಬಿಲ್ಡಿಂಗ್ ಮಾಲೀಕ ನಾರಾಯಣ್ ತಲೆಮರಿಸಿಕೊಂಡಿದ್ದು ಅವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Comments are closed.