
ದುಬೈ: ದಿನದಿಂದ ದಿನಕ್ಕೆ ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್ ಓದುಗ ಬಳಗವನ್ನು ಹೆಚ್ಚಿಸುವ ಮೂಲಕ ಸಾಮಾಜಿಕ ತಾಣಗಳಲ್ಲಿ ತೀವ್ರಗತಿಯಲ್ಲಿ ಜನಮನ್ನಣೆಗಳಿಸುತ್ತಿದ್ದು, ಫೇಸ್‌ಬುಕ್‌ನಲ್ಲಿ 5 ಲಕ್ಷ ಓದುಗರ ಲೈಕ್(ಮೆಚ್ಚುಗೆ)ನ್ನು ಗಳಿಸುದರೊಂದಿಗೆ ತನ್ನ ಹೆಗ್ಗಳಿಕೆಯ ಓಟವನ್ನು ಮುಂದುವರಿಸಿದೆ.
ಕರ್ನಾಟಕದಲ್ಲಿ ಬಹುದೊಡ್ಡ ಸಂಖ್ಯೆಯ ಓದುಗ ಬಳಗವನ್ನು ಹೊಂದಿರುವ ‘ಕನ್ನಡಿಗವರ್ಲ್ಡ್’, ಭಾರತ, ಗಲ್ಫ್ ರಾಷ್ಟ್ರ, ಅಮೇರಿಕ ಸೇರಿದಂತೆ ವಿವಿಧ ಕಡೆಗಳಲ್ಲಿರುವ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕ, ಕರಾವಳಿ ಕರ್ನಾಟಕ, ಭಾರತದಲ್ಲಿ ನಡೆಯುವಂಥ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಕ್ರೀಡೆ, ಅಪರಾಧ ಸುದ್ದಿ, ಮನೋರಂಜನೆಯ ಆಗುಹೋಗುಗಳನ್ನು ಕ್ಷಣ ಕ್ಷಣಕ್ಕೂ ನೀಡುತ್ತಿರುವ ‘ಕನ್ನಡಿಗವರ್ಲ್ಡ್’, ಓದುಗರಿಗೆ ಅಚ್ಚುಮೆಚ್ಚಿನ ನ್ಯೂಸ್ ವೆಬ್‌ಸೈಟ್ ಆಗಿ ಹೊರಹೊಮ್ಮುತ್ತಿದೆ.
‘ಕನ್ನಡಿಗವರ್ಲ್ಡ್’ ಕನ್ನಡ-ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್‌ಆ್ಯಪ್‌ಕೂಡ ಹೊರತಂದಿದ್ದು, ಓದುಗರು ಆ್ಯಪ್‌ನಲ್ಲಿಯೂ ವರದಿ, ಮಾಹಿತಿಗಳನ್ನು ನೋಡಬಹುದಾಗಿದೆ. ಆರೋಗ್ಯ, ತಂತ್ರಜ್ಞಾನ, ಪ್ರೇಕ್ಷಣೀಯ ಸ್ಥಳಗಳ ಕುರಿತ ಮಾಹಿತಿ ಜೊತೆಗೆ ಕನ್ನಡಿಗರು ದೇಶ-ವಿದೇಶಗಳಲ್ಲಿ ನಡೆಸುವ ಕಾರ್ಯಕ್ರಮದ ಕುರಿತ ವರದಿ ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್ ನ್ನು ಇನ್ನಷ್ಟು ಜನರಿಗೆ ತಲುಪುವಂತೆ ಮಾಡಿದೆ.
ಫೇಸ್‌ಬುಕ್‌ನಲ್ಲಿ ನೂರಾರು ವರದಿಗಳು ಲಕ್ಷಾಂತರ ಮಂದಿಗೆ ತಲುಪುವ ಜೊತೆಗೆ ಸಾವಿರಾರು ಮಂದಿ ಶೇರ್ ಮಾಡುತ್ತಿರುವುದು ಹಾಗು ಒಂದೊಂದು ವರದಿಗೆ ಬರುತ್ತಿರುವ ಕಾಮೆಂಟ್ಸ್ ಗಳ ಸಂಖ್ಯೆ ಕೂಡ ಸಾವಿರದ ಗಡಿ ದಾಟುವ ಮೂಲಕ ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್ ಮಿಂಚಿನ ಶರವೇಗದಲ್ಲಿ ಮುನ್ನುಗ್ಗುತ್ತಿದೆ.
2013ರ ಮಾರ್ಚ್ 15ರಂದು ದುಬೈ ‘ಆ್ಯಕ್ಮೆ ವಿಷನ್’ ಅಡಿಯಲ್ಲಿ ಆರಂಭಗೊಂಡಿರುವ ‘ಕನ್ನಡಿಗವರ್ಲ್ಡ್’ ತಾಜಾ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ, ಮಾಹಿತಿಯ ನೀಡಿ, ಫೇಸ್‌ಬುಕ್‌ನಲ್ಲಿ ಬಹಳ ವೇಗವಾಗಿ ಓದುಗರನ್ನು ತಲುಪುತ್ತಿದೆ. ಜೊತೆಗೆ ಫೇಸ್‌ಬುಕ್‌ನಲ್ಲಿ ವರದಿಗಳ ಕುರಿತು ಕಾಮೆಂಟ್ಸ್ ಮೂಲಕ ಆರೋಗ್ಯಕರ ಚರ್ಚೆಗೂ ವೇದಿಕೆಯನ್ನು ಒದಗಿಸಿದೆ.
ಫೇಸ್‌ಬುಕ್‌ನಲ್ಲಿ ಲೈಕ್ ಗಳ ಸಂಖ್ಯೆ 5 ಲಕ್ಷದ ಗಡಿ ದಾಟಿದ್ದು, ಒಂದೊಂದು ನಿಮಿಷಕ್ಕೂ ನೂರಾರು ಕಾಮೆಂಟ್ಸ್ ಗಳು ಬರುತ್ತಿರುದು ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್ ನ್ನು ಮತ್ತಷ್ಟು ಜವಾಬ್ದಾರಿಯುತವಾಗಿಸಿದೆ. ‘ಕನ್ನಡಿಗವರ್ಲ್ಡ್’ಗೆ ಇಷ್ಟು ದೊಡ್ಡ ಮಟ್ಟದ ಮನ್ನಣೆ ಸಿಗುವಂತೆ ಮಾಡಿದ ಓದುಗ ಬಳಗಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆ.
Comments are closed.