
ಬೆಂಗಳೂರು: ಗಂಡನನ್ನೇ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಳು ಪತ್ನಿ, ಆದ್ರೆ ಅದೃಷ್ಟವಶಾತ್ ಸಾವಿನ ದವಡೆಯಿಂದ ಅಮಾಯಕ ಬದುಕುಳಿದಿದ್ದು, ಇದೀಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಹೌದು, ಇಂತಹದೊಂದು ಘಟನೆ ಬೆಂಗಳೂರಿನ ಹೆಬ್ಬಾಳದ ಭದ್ರಪ್ಪ ಲೇಔಟ್‍ನಲ್ಲಿ ನಡೆದಿದ್ದು, ಜಾನಕಿ ಎಂಬಾಕೆ ತನ್ನ ಪತಿ ರಾಜುವಿನ ಹತ್ಯೆಗೆ ಸುಪಾರಿ ನೀಡಿದ್ದಳು. ಸುಪಾರಿ ಪಡೆದ ಬಿಹಾರ ಮೂಲದ ಆರೋಪಿಗಳು ರಾಜುವಿಗೆ ಕಂಠಪೂರ್ತಿ ಕುಡಿಸಿ, ಕುತ್ತಿಗೆ ಕೊಯ್ದಿದ್ದರು. ರಾಜು ಮೃತಪಟ್ಟಿದ್ದಾರೆ ಎಂದು ಮಹದೇವಪುರದ ಊಡಿ ಎಂಬಲ್ಲಿದ್ದ ತೋಪಿನಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಆದ್ರೂ ಪವಾಡ ರೀತಿಯಲ್ಲಿ ಬದುಕಿ ಬಂದಿದ್ದರು.
ಸೂಪಾರಿ ಕೊಟ್ಟಿದ್ದೇಕೆ?: ರಾಜು ಹಾಗೂ ಜಾನಕಿ ಭದ್ರಪ್ಪ ಲೇಔಟ್‍ನಲ್ಲಿ ವಾಸವಿದ್ದು, ಜೆಎಂಸಿ ಕಂಪನಿಯ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಆದ್ರೆ ಪ್ರತಿನಿತ್ಯ ಗಂಡ ಕುಡಿದು ಬರುತ್ತಾನೆ ಎಂಬ ಕಾರಣಕ್ಕೆ ಬಿಹಾರದ ಮೂಲದ ಇಬ್ಬರು ವ್ಯಕ್ತಿಗಳು ಪತಿಯನ್ನ ಕೊಲೆ ಮಾಡುವಂತೆ ಜಾನಕಿ ಸುಪಾರಿ ನೀಡಿದ್ದಳು.
ಸದ್ಯ ರಾಜು ಜೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ದವಡೆಯಿಂದ ಹೊರಬಂದಿದ್ದಾರೆ. ಇದೀಗ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Comments are closed.