ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮರಳಿಗೆ ಅಭಾವ: ಮರಳಿಗಾಗಿ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ನಿರ್ಮಾಣವಾಗಿರುವ ಮರಳಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.

udupi_maralu_upavasa-1 udupi_maralu_upavasa-2 udupi_maralu_upavasa-3 udupi_maralu_upavasa-4

ಉಡುಪಿ ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ಮರಳು ಸಿಗದೇ ಕಟ್ಟಡ ಕಾರ್ಮಿಕರು, ಮನೆ ಕಟ್ಟುವವರು, ಬಡವರು ಸಂಕಷ್ಟದಲ್ಲಿದ್ದು ಮರಳು ಸಿಗದ ಕಾರಣ ಅಭಿವೃದ್ದಿ ಕೂಡಾ ಕುಂಠಿತವಾಗಿದೆ. ಮರಳು ತೆಗೆಯಲು ಇರುವ ತಡೆಯಾಜ್ಞೆಯನ್ನು ಕೋರ್ಟ್ ನಲ್ಲಿ ತೆರವುಗೊಳಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು. ಮರಳಿನ ಅಭಾವದ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದ್ದು ಅವರು ಬರೇ ಸನ್ಮಾನ ಸ್ವೀಕರಿಸುವುದರಲ್ಲೇ ಮಗ್ನರಾಗಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಗಮನಹರಿಸಿ ಕಟ್ಟಡ ಕಾರ್ಮಿಕರ ಸಮಸ್ಯೆಗೆ, ಬಡವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಇದೇ ಸಂದರ್ಬದಲ್ಲಿ ಕಾರ್ಮಿಕ ಮುಖಂಡರು ಆಗ್ರಹಿಸಿದರು.

Comments are closed.