ಅಂತರಾಷ್ಟ್ರೀಯ

ಉರಿ ದಾಳಿ: ಅಂತರಾಷ್ಟ್ರೀಯ ತನಿಖೆಗೆ ಪಾಕ್ ಒತ್ತಾಯ

Pinterest LinkedIn Tumblr

terror-attack-in-uriಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು ಪಾಕ್ ಉಗ್ರರು ಎಂಬ ಭಾರತದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪಾಕಿಸ್ತಾನ, ಭಾರತದ ಆರೋಪ ಆಧಾರ ರಹಿತ ಮತ್ತು ಸತ್ಯ ಹೊರಬರಲು ಅಂತರಾಷ್ಟ್ರೀಯ ತನಿಖೆಯಾಗಬೇಕು ಎಂದು ಸೋಮವಾರ ಒತ್ತಾಯಿಸಿದೆ.
ಭಾರತದಲ್ಲಿ ಯಾವ ದಾಳಿ ನಡೆದರೂ ಆ ದಾಳಿಯ ಬಗ್ಗೆ ತನಿಖೆ ನಡೆಸುವ ಮೊದಲೇ ಭಾರತ ಪಾಕಿಸ್ತಾನದ ವಿರುದ್ಧ ಆರೋಪ ಮಾಡುತ್ತದೆ ಎಂದು ಪಾಕಿಸ್ತಾನ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝಿಜ್ ಅವರು ಹೇಳಿರುವುದಾಗಿ ರೆಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಸೆಪ್ಟೆಂಬರ್ 18ರಂದು ನಡೆದ ಉರಿ ಉಗ್ರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಸ್ವತಂತ್ರ ಅಂತರಾಷ್ಟ್ರೀಯ ಆಯೋಗ ರಚಿಸಬೇಕು ಅಝಿಜ್ ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ ಉಗ್ರ ಸಂಘಟನೆ ಉರಿ ಸೆಕ್ಟರ್ ಮೇಲೆ ದಾಳಿ ನಡೆಸಿದೆ ಎಂದು ಭಾರತ ಆರೋಪಿಸಿದೆ. ಈ ಹಿಂದೆಯೂ ಜನವರಿ 2ರಂದು ನಡೆದ ಪಠಾಣ್ ಕೋಟ್ ದಾಳಿ ನಡೆದಾಗಲೂ ಭಾರತ ಇದೇ ರೀತಿಯ ಆರೋಪ ಮಾಡಿತ್ತು ಎಂದು ಅಝಿಜ್ ಹೇಳಿದ್ದಾರೆ.
ಉರಿ ಉಗ್ರ ದಾಳಿಯಲ್ಲಿ 18 ಭಾರತೀಯ ಯೋಧರು ಹುತಾತ್ಮರಾಗಿದ್ದರು.

Comments are closed.