ಮುಂಬೈ

ಮಾಲೆಗಾಂವ್ ಸ್ಫೋಟ ಆರೋಪಿ ಪುರೋಹಿತ್’ಗೆ ಜಾಮೀನು ನಿರಾಕರಣೆ

Pinterest LinkedIn Tumblr

malegaon

ಮುಂಬೈ (ಸೆ.26): 2008 ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಂಬೈಯ ವಿಶೇಷ ನ್ಯಾಯಾಲಯವು ಶಂಕಿತ ಉಗ್ರ ಮಾಜಿ ಸೇನಾ ಅಧಿಕಾರಿ ಲೆ.ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್’ನ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.
ತನ್ನ ಜಾಮೀನು ಅರ್ಜಿಯಲ್ಲಿ ಪುರೋಹಿತ್, ಅಭಿನವ ಭಾರತ್ ಟ್ರಸ್ಟ್’ಅನ್ನು ರಾಜಕೀಯ ಪಕ್ಷವಾಗಿ ನೊಂದಾಯಿಸಲು ಸ್ಥಾಪಿಸಲಾಗಿತ್ತು ಹಾಗೂ ಹಿರಿಯ ಸೇನಾಧಿಕಾರಿಗಳನ್ನು ಕೂಡಾ ಸಂಪರ್ಕದಲ್ಲಿಸಲಾಗಿತ್ತು ಎಂದು ಹೇಳಿದ್ದಾನೆ.
ಸ್ಫೋಟ ನಡೆಸಲು ಬೇಕಾಗಿರುವ ಶಸ್ತ್ರಾಸ್ತ್ರಗಳು ಹಾಗೂ ಸಾಮಾಗ್ರಿಗಳನ್ನು ಅಭಿನವ ಭಾರತ್ ಸಂಸ್ಥೆಯು ಸಂಗ್ರಹಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಏ)ಯು ಹೇಳಿದೆ.
ಸೇನೆಯ ಸೇವೆಯಲ್ಲಿದ್ದು ಪುರೋಹಿತ್ ಸೇನೆಯ ನಿಯಮಗಳನ್ನು ಉಲ್ಲಂಘಿಸಿ 2006ರಲ್ಲಿ ಸಂಘಟನೆಯನ್ನು ರಚಿಸಿದ್ದಾನೆಂದು ಎನ್ಐಏ ಹೇಳಿತ್ತು. ಪುರೋಹಿತ್ ಆ ಬಳಿಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಆ ಸಂಘಟನೆ ಹೆಸರಿನಲ್ಲಿ ಹಣವನ್ನು ಕೂಡಾ ಸಂಗ್ರಹಿದ್ದಾನೆ.

Comments are closed.