
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಸೆಪ್ಟಂಬರ್.25: ಸದ್ಗುರು ಶ್ರೀ ಮಾತಾ ಅಮೃತಾನಂದ ಮಯಿ ದೇವಿಯವರಿಂದ 6 ವರ್ಷಗಳ ಹಿಂದೆ ದಿನಾಂಕ 27–9-2010 ರಂದು ಕೇರಳದ ಅಮೃತಪುರಿಯಲ್ಲಿ ಪ್ರಾರಂಭಗೊಂಡ ಅಮಲಭಾರತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ದೇಶದ ವಿವಿಧ ಸ್ಥಳಗಳಲ್ಲಿ ನಾಲ್ಕನೇ ಭಾನುವಾರ ಸ್ವಚ್ಛ ಭಾನುವಾರ” ಎಂಬ ಧ್ಯೇಯ ವಾಕ್ಯದಡಿ ಮುಂದುವರಿಯುತ್ತಿದೆ.
ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಪರಿಕಲ್ಪನೆಯ ಅಮ್ಮನವರ ಈ ಯೋಜನೆ ಮಂಗಳೂರಿನಲ್ಲಿ 2011 ರ ಮೇ 1 ರಂದು ಚಾಲನೆಗೊಂಡಿತು. ಮಂಗಳೂರಿನ ಸ್ವಚ್ಛತೆಯ ಸಂಕಲ್ಪದೊಂದಿಗೆ ಅಮ್ಮನವರು ಆರಂಭಿಸಿದ ಈ ಸ್ವಚ್ಛತಾ ಮಹಾಯಜ್ಞದ 64ನೇ ಕಾರ್ಯಕ್ರಮವನ್ನು ಸೆಪ್ಟಂಬರ್.25ನೇ ಭಾನುವಾರದಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.

ಮಾತಾ ಅಮೃತಾನಂದಮಯಿ ಮಠ, ಅಮೃತಾ ಯುವಧರ್ಮ ಧಾರಾ, ರೋಶನಿ ನಿಲಯ ಹಾಗೂ ಮಿಲಾಗ್ರಿಸ್, ಕಾಲೇಜಿನ ಎನ್.ಎಸ್.ಎಸ್ ಘಟಕದ ಸೇವಾರ್ಥಿಗಳ ಪರಿಶ್ರಮದೊಂದಿಗೆ ಕೈಗೊಳ್ಳಲಾದ ಈ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ಜಿಲ್ಲಾಸರ್ವೇಕ್ಷಣಾಧಿಕಾರಿ ಹಾಗೂ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ರಾಜೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ವಿಧ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಉಪಾಧ್ಯಕ್ಷರಾದ ಡಾ.ದೇವದಾಸ್ ಕೆ.ಪುತ್ರನ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳೊಂದಿಗೆ ಆರೋಗ್ಯ ಪೂರ್ಣ ಜೀವನಕ್ಕೆ ಸ್ವಚ್ಛತೆಯ ಪರಿಪಾಲನೆ ಅಗತ್ಯ ಎಂದರು.
ಅಮೃತ ಯುವಧರ್ಮಧಾರಾ ” ಅಯುಧ್,” ಸಂಚಾಲಕರಾದ ಸುದೀಪ್ ಅವರು ಮಾತನಾಡಿ, ಈ ಕಾರ್ಯಕ್ರಮ ಕೇವಲ ಒಂದು ದಿನದ ಕಾರ್ಯಕ್ರಮವಾಗಿರ ಬಾರದು, ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರು ಅಲ್ಲಲ್ಲಿ ಕಸಚೆಲ್ಲದಂತೆ ಹಾಗೂ ಶುಚಿತ್ವ ಪಾಲನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯುವ ಸಮುದಾಯದ ಪಾತ್ರ ಅಗತ್ಯ ಎಂದರು.

ಅಮಲ ಭಾರತ ಅಭಿಯಾನದ ಅಧ್ಯಕ್ಷರಾದ ಡಾ. ಜೀವರಾಜ್ ಸೊರಕೆ ಸೇವಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಅಮಲ ಭಾರತ ಅಭಿಯಾನದ ಸಂಚಾಲಕರಾದ ಮಾಧವ ಸುವರ್ಣ,ರವೀಂದ್ರನಾಥ್, ಪರಿಸರವಾದಿ ಕೃಷ್ಣಪ್ಪ, ನಿರಂಜನ್ ಅಡ್ಯಂತಾಯ, ರಾಮಕೃಷ್ಣ, ರೋಶನಿ ನಿಲಯ ಎನ್.ಎಸ್.ಎಸ್ ಅಧಿಕಾರಿ ಶ್ರೀಮತಿ ಮಮತ, ರೋಶನಿ ನಿಲಯ ಎನ್.ಎಸ್.ಎಸ್ ಉಪ ಸಮನ್ವಯಾಧಿಕಾರಿ ಬಾಲಕೃಷ್ಣ, ರೊಟೇರಿಯನ್ ರಾಧಕೃಷ್ಣ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವೆಗೈದರು. ಲೇಡಿಗೋಷನ್ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಸ್ವಚ್ಛತಾ ವಿಭಾಗದ ಸೇವಾರ್ಥಿಗಳು ಸಹಕರಿಸಿದರು.
Comments are closed.