ರಾಷ್ಟ್ರೀಯ

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಯುವಕರು; ಏನು ಆಗ್ರಹಿಸಿದ್ದಾರೆ ಗೊತ್ತಾ..?

Pinterest LinkedIn Tumblr

khoon-letter

ಉತ್ತರಪ್ರದೇಶ: ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿ ದೇಶಾದ್ಯಂತ ಆಕ್ರೋಶ ಮೂಡಿಸಿದೆ. ಇದೀಗ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಯುವಕರು ತಮ್ಮ ರಕ್ತದಿಂದ ಪ್ರಧಾನಿ ಮೋದಿಗೆ ಪತ್ರ ಬರೆದು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಶಹಿದೋಂ ಕೋ ಇನ್ಸಾಫ್ ಚಾಯಿಯೇ, ನವಾಜ್ ಕೋ ಹೋಶ್ ಮೇ ಲಾವೋ, ವಾರ್ತಾ ನಹೀ ಜಂಗ್ ಚಾಯಿಯೇ, ವಿಶ್ವಸಂಸ್ಖೆಯಲ್ಲಿ ನವಾಜ್ ಭಾಷಣ ಮಾಡಿದ ನಂತರವಾದರೂ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಯುವಕರು ರಕ್ತದಿಂದ ಪತ್ರ ಬರೆದಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಉರಿ ಸೇನಾ ಕಚೇರಿಯ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಉಗ್ರರು, 18 ಸೈನಿಕರನ್ನು ಹತ್ಯೆಗೈದಿದ್ದಲ್ಲದೇ 20 ಕ್ಕೂ ಹೆಚ್ಚು ಸೈನಿಕರನ್ನು ಗಾಯಗೊಳಿಸಿದ್ದರು.

ನಂತರ ನಡೆದ ಎನ್‌ಕೌಂಟರ್‌ನಲ್ಲಿ ಸೇನಾಪಡೆಗಳು ಕೆಲವೇ ಗಂಟೆಗಳಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದರು.

ಸೇನಾ ಕಚೇರಿಯ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದಾರೆ. ದಾಳಿಯ ಹಿಂದಿರುವವರನ್ನು ಶಿಕ್ಷಿಸದೇ ಬಿಡಲಾರೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

Comments are closed.