ನವದೆಹಲಿ: ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯ ಎರಡು ತುಕಡಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿವೆ ಎಂಬ ವೈಬ್ ಸೈಟ್ ಸುದ್ದಿ ಸತ್ಯವಲ್ಲ ಎಂದು ಭಾರತೀಯ ಸೇನೆ ಗುರುವಾರ ಸ್ಪಷ್ಟಪಡಿಸಿದೆ.
ಖಾಸಗಿ ನ್ಯೂಸ್ ವೆಬ್ ಸೈಟ್ ವೊಂದರ ವರದಿಯಲ್ಲಿರುವಂತೆ ಸೇನೆಯಿಂದ ಯಾವುದೇ ದಾಳಿಗಳು ನಡೆದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಯಾವುದೇ ಭಾರತೀಯ ಸೈನಿಕರು ಹೋಗಿಲ್ಲ ಎಂದು ಭಾರತೀಯ ಸೇನೆ ಹೇಳಿದೆ. ಉರಿ ಉಗ್ರ ದಾಳಿ ಕುರಿತಂತೆ ಪಾಕಿಸ್ತಾನ ಹಾಗೂ ಭಾರತ ನಡುವಿನ ಸಂಬಂಧ ಹದಗೆಟ್ಟಿರುವುದು ನಿಜ. ಆದರೆ ಪಾಕಿಸ್ತಾನದ ವಿರುದ್ಧವಾಗಲಿ ಅಥವಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ದಾಳಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಖಾಸಗಿ ವೆಬ್ ಸೈಟ್ ವೊಂದು ಉರಿ ಉಗ್ರ ದಾಳಿ ಬಳಿಕ ಭಾರತೀಯ ಸೇನೆಯ 2 ತುಕಡಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ 20 ಉಗ್ರರು ಹತರಾಗಿ 200ಕ್ಕೂ ಹೆಚ್ಚು ಮಂದಿ ಉಗ್ರರು ಗಾಯಗೊಂಡಿದ್ದರು ಎಂದು ವರದಿ ಮಾಡಿತ್ತು.
ರಾಷ್ಟ್ರೀಯ
Comments are closed.