ಕರಾವಳಿ

ಉಡುಪಿಯಲ್ಲಿ ‘ಮರಳು’ ಪ್ರತಿಭಟನೆ: ಮಳೆಯನ್ನು ಲೆಕ್ಕಿಸದೇ ೩ ಸಾವಿರಕ್ಕೂ ಅಧಿಕ ಮಂದಿ ಭಾಗಿ

Pinterest LinkedIn Tumblr

ಉಡುಪಿ: ಬೆಂಬಿಡದೇ ಮಳೆ ಸುರಿತಾ ಇದ್ರು ಕೂಡಾ ಜನ ಪ್ರತಿಭಟನೆಯ ಸಾಲನ್ನು ಬಿಡಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಅನುಭವಿಸುತ್ತಿರುವ ತೊಂದರೆಯನ್ನು ಪ್ರತಿಭತನೆಯ ಮೂಲಕ ಕಾರ್ಮಿಕರು, ನಾಗರೀಕರು ತೋರ್ಪಡಿಸಿಕೊಂಡರು. ಇವರ ಜೊತೆಗೆ ಬಿಲ್ಡರ್ಸ್ ಗಳು, ವಿವಿಧ ಪಕ್ಷದ ಕಾರ್ಯಕರ್ತರು, ಸ್ವಾಮೀಮಿ ಭಾಗವಹಿಸಿದರು. ಹಾಗಾದ್ರೆ ಉಡುಪಿಯಲ್ಲಿ ನಡೆದ ಪ್ರತಿಭಟನೆ ಯಾಕೆ ಗೊತ್ತಾ?. ಇಲ್ಲಿದೆ ನೋಡಿ ಡೀಟೇಲ್ಸ್..

ಉಡುಪಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಹಾಗೂ ಸಿ.ಆರ್.ಝಡ್ ವ್ಯಾಪ್ತಿಯ ಮರಳುಗಾರಿಕೆ ನಡೆಯುತ್ತಿದೆ. ಈ ಮರಳುಗಾರಿಕೆಗೆ ಗಣಿಮತ್ತು ಭೂ ವಿಜ್ಞಾನ ಇಲಾಖೆ ಅನುಮತಿಯನ್ನು ನೀಡುತ್ತಿದೆ. ಜಿಲ್ಲಾಡಳಿತ ಮರಳಿನ ದಿಬ್ಬಗಳನ್ನು ಗುರುತಿಸಿ ಅವುಗಳನ್ನು ಅರ್ಹರಿಗೆ ಪರವಾನಿಗೆ ನೀಡುವ ಮೂಲಕ ಮರಳುಗಾರಿಕೆಗೆ ಅವಕಾಶ ಕಲ್ಪಿಸುತ್ತಿದೆ. ಆದ್ರೆ ಉಡುಪಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಮರಳುಗಾರಿಕೆ ನಡೆಸಲು ನಿಷೇಧಾಜ್ಞೆ ಇದೆ. ಕಾರಣ ವ್ಯಕ್ತಿಯೋರ್ವರು ಕೋರ್ಟ್ ಮೆಟ್ಟಿಲೇರಿದ್ದು. ಹಿಂದಿನ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ಗುರುತಿಸಿದ್ದ 20 ಮರಳ ದಿಬ್ಬಗಳನ್ನು ಬೇಕಾಬಿಟ್ಟಿಯಾಗಿ ಪರವಾನಿಗೆ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ಕೋರ್ಟ್ ಮೆಟ್ಟಿಲೇರಿದ ಕಾರಣ ಇದೀಗ ಮರಳುಗಾರಿಕೆ ಇಲ್ಲದೇ ಅದೆಷ್ಟೋ ಜನ ಕಂಗಾಲಾಗಿದ್ದಾರೆ.

udupi_maralugarike_protest-1 udupi_maralugarike_protest-7 udupi_maralugarike_protest-4 udupi_maralugarike_protest-5 udupi_maralugarike_protest-3 udupi_maralugarike_protest-6 udupi_maralugarike_protest-2

ಮರಳುಗಾರಿಕೆಯನ್ನು ನಂಬಿ ಅದೆಷ್ಟೋ ಕುಟುಂಬ ಇದ್ದಾವೆ. ಮಾತ್ರ ಅಲ್ಲ ಎಲ್ಲಾ ಅಭಿವೃದ್ದಿ ಕಾರ್ಯ, ಮನೆ ಕಟ್ಟಲು ಅಗತ್ಯವಾಗಿ ಮರಳು ಬೇಕಾಗಿರುವುದುದರಿಂದ ಬರೇ ಒಂದು ವರ್ಗ ಮಾತ್ರ ಕಾರ್ಮಿಕ ವರ್ಗ, ನಾಗರಿಕರು, ಬಿಲ್ಡರ್ಸ್ ಗಳಿಗೂ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ಆದಷ್ಟು ಬೇಗ ಮರಳುಗಾರಿಕೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಪಕ್ಷ ಬೇಧ ಮರೆತು ಸುಮಾರು 22 ಸಂಘಟನೆಯ 3 ಸಾವಿರಕ್ಕೂ ಅಧಿಕ ಪ್ರತಿಭಟನಾ ಕಾರರು ಜೋಡುಕಟ್ಟೆಯಿಂದ ಡಿಸಿ ಕಚೇರಿ ತನಕ ಜಾಥಾ ನಡೆಸಿದರು. ಇದರಲ್ಲಿ ಅಷ್ಟಮಠಾದೀಶರಲ್ಲಿ ಒಬ್ಬರಾದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರು ಪ್ರತಿಭಟನೆಗೆ ಸಾಥ್ ನೀಡಿದರು.

ಒಟ್ಟಿನಲ್ಲಿ ಉಡುಪಿಯಲ್ಲಿ ನಿಂತಿರುವ ಮರಳುಗಾರಿಕೆಯಿಂದ ಅನೇಕ ಮಂದಿ ತೊಂದರೆಗೆ ಒಳಗಾಗಿದ್ದಾರೆ, ಅಭಿವೃದ್ದಿ ಕಾರ್ಯ ಕುಂಠಿತವಾಗಿದೆ. ಇನ್ನಾದರೂ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Comments are closed.