ಕರ್ನಾಟಕ

ಮೈಸೂರಿನಲ್ಲಿರುವ ಪ್ರತಾಪ್ ಸಿಂಹ ನಿವಾಸಕ್ಕೆ ಮುತ್ತಿಗೆ…ರಾಜೀನಾಮೆಗೆ ಆಗ್ರಹ

Pinterest LinkedIn Tumblr

pratapa-simha

ಮೈಸೂರು: ಇಲ್ಲಿನ ವಿಜಯನಗರದಲ್ಲಿರುವ ಸಂಸದ ಪ್ರತಾಪ್ ಸಿಂಹ ನಿವಾಸಕ್ಕೆ ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಮುತ್ತಿಗೆ ಹಾಕಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಕಾವೇರಿ ಹೋರಾಟದಲ್ಲಿ ತೊಡಗದೆ ಅತ್ತ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಯೂ ಜಿಲ್ಲೆಯ ಸಂಕಷ್ಟವನ್ನು ಹೇಳಿಕೊಳ್ಳದೆ ಕಾಲಹರಣ ಮಾಡುತ್ತಿರುವ ಪ್ರತಾಪ್ ಸಿಂಹ ಅವರು ಕೂಡಲೇ ತಮ್ಮ ರಾಜೀನಾಮೆ ನೀಡಿ ಜನರ ಜೊತೆಗೆ ಹೋರಾಟಕ್ಕೆ ಧುಮುಕಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ನೆಲಜಲದ ಬಗ್ಗೆ ತಮ್ಮ ಇಚ್ಛಾಶಕ್ತಿಯನ್ನು ಈಗ ತೋರಿಸಬೇಕಿದೆ. ಕೂಡಲೇ ಸುಪ್ರೀಂಕೋರ್ಟ್‍ನಿಂದ ಬಂದಿರುವ ವ್ಯತಿರಿಕ್ತ ತೀರ್ಪನ್ನು ಖಂಡಿಸಿ ರಾಜೀನಾಮೆ ಬಿಸಾಕಿ ಬನ್ನಿ. ನಾವು ಹಾಗೂ ಮೈಸೂರಿನ ಜನತೆ ನಿಮ್ಮ ಜೊತೆಗಿದ್ದೇವೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಕಾವೇರಿ ವಿಷಯದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಖಂಡಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ನಗರದ ಪತ್ರಿಕಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದರು. ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಪತ್ರಕರ್ತರು ಒತ್ತಾಯಿಸಿದ್ದಾರೆ.

Comments are closed.