ಕರಾವಳಿ

ನಾದುರಸ್ತಿಯಲ್ಲಿ ಸಾರ್ವಜನಿಕ ಶೌಚಾಲಯ- ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚತೆ ಕಾಪಾಡುವಲ್ಲಿ ಆಡಳಿತ ಪಕ್ಷ ವಿಫಲ :ರೂಪಾ ಡಿ. ಬಂಗೇರ ಆರೋಪ

Pinterest LinkedIn Tumblr

public_toilet_press_1

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚತೆ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಪಕ್ಷದ ಪ್ರತಿನಿಧಿಗಳು ತಾರತಮ್ಯ ಮಾಡುತ್ತಿದ್ದಾರೆ.ಕೆಲವು ಕಡೆ ಕಸ ವಿಲೇವಾರಿಯಾಗದಿದ್ದರೂ ಬಿಲ್ ಪಾವತಿಯಾಗುತ್ತಿದೆ. ಹಂಪನ್ ಕಟ್ಟೆ ಪ್ರದೇಶದಲ್ಲಿ ಶೌಚಾಲಯಗಳ ದುರಸ್ತಿ ನಡೆಯದೆ ನೈರ್ಮಲ್ಯತೆಗೆ ದಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚತೆ ಬಗ್ಗೆ ಇಷ್ಟೆಲ್ಲಾ ಸಮಸೈಗಳಿದ್ದರೂ ಆಡಳಿತ ಪಕ್ಷದ ಪ್ರತಿನಿಧಿಗಳು ಮಾತ್ರ ಒಬ್ಬರಿಗೊಬ್ಬರನ್ನು ದೂರುತ್ತಿದ್ದಾರೆ ಹೊರತು ಸ್ವಚತೆಯನ್ನು ಕಾಪಾಡಲು ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ಹೃದಯ ಭಾಗದ ಕೇಂದ್ರ ಮಾರುಕಟ್ಟೆ ಪ್ರದೇಶಗಳಲ್ಲಿ ಕಸವಿಲೇವಾರಿಯಾಗುತ್ತಿಲ್ಲ.ಇಲ್ಲಿ ಯಥಾವತ್ತಾಗಿ ಕಸವಿಕೇವಾರಿಯಾಗದಿದ್ದರೂ ಬಿಲ್ ಪಾವತಿಯಾಗುತ್ತಿದೆ. ಸ್ವಚ್ಚತೆ ಕಲ್ಪನೆ ಇಲ್ಲಿ ಕಾಣಸಿಗುವುದೇ ಇಲ್ಲ ಇನ್ನು ನಗರ ಪಾಲಿಕೆ ಗುತ್ತಿಗೆದಾರರ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದರು.

public_toilet_press_2

public_toilet_press_3

public_toilet_press_4

ಶೌಚಾಲಯ, ಸಾರ್ವಜನಿಕ ಮತ್ತು ಮನೆ ಸುತ್ತಮುತ್ತಲ ನೈರ್ಮಲ್ಯಕ್ಕೆ ಒತ್ತು ನೀಡುವ ಕಾರ್ಯವಾಗಿಲ್ಲ. ನಗರ ನೈರ್ಮಲ್ಯಕ್ಕೆ ಯಾವುದೇ ರೂಪುರೇಷೆ ಕೂಡ ಹಾಕಿಲ್ಲ. ಟೈಗರ್ ಕಾಯಾಚರಣೆ ಹಾಗೂ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆ ಹೆಸರಿಗೆ ತಕ್ಕ ನಡೆಯುತಿದೆಯಷ್ಟೆ.ದುಸ್ಥಿತಿಯಲ್ಲಿರುವ ನಗರದ ಹಳೆಯ ಶೌಚಾಲಯಗಳ ದುರಸ್ತಿ ನಡೆಯುತ್ತಿಲ್ಲ. ನಗರಕ್ಕಾಗಮಿಸುವ ಗ್ರಾಮೀಣಭಾಗದ ಮಹಿಳೆಯರಿಗೆ ತೀವ್ರ ಸಂಕಷ್ಟವಾಗುತ್ತಿದೆ. ಜೊತೆಗೆ ನಗರ ಸೌಂದರ್ಯ ಮತ್ತು ನೈರ್ಮಲ್ಯತೆಗೂ ಧಕ್ಕೆಯಾಗುತ್ತಿದೆ. ಆಡಳಿತ ಪಕ್ಷದ ಪ್ರತಿನಿಧಿಗಳಿಗೆ ಆಡಳಿತದ ಬಗ್ಗೆ ಇಚ್ಚಾಶಕ್ತಿಯಿಲ್ಲ ಎಂದು ದೂರಿದರು.

ನಗರದಲ್ಲಿರುವ ಹಳೆಯ ಶೌಚಾಲಯಗಳನ್ನು ದುರಸ್ಥಿ ಪಡಿಸಿ ಸಾರ್ವಜನಿಕರಿಗೆ ಯೋಗ್ಯವನ್ನಾಗಿಸುವಂತೆ ಹಾಗೂ ನಗರ ನೈರ್ಮಲ್ಯಕ್ಕೆ ಹೆಚ್ಚು ಗಮನ ಹರಿಸುವಂತೆ ರೂಪಾ ಡಿ. ಬಂಗೇರ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ| ಬ್ರಿಜೇಶ್ ಚೌಟ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಮ.ನ ಪಾ ಸದಸ್ಯ ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Comments are closed.