ಕರ್ನಾಟಕ

ಶಿವಾಜಿನಗರದಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆ: ರೋಷನ್ ಬೇಗ್

Pinterest LinkedIn Tumblr

220px-roshan_baigಬೆಂಗಳೂರು, ಸೆ. ೧೬- ಶಿವಾಜಿನಗರದಲ್ಲಿ ನಾರಾಯಣ ಹೃದಯಾಲಯದ ಆಸ್ಪತ್ರೆ ಆರಂಭವಾಗಲಿದೆ. ಈ ಸಂಬಂಧ ಇಂದು ನಾರಾಯಣ ಹೃದಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ದೇವಿಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಭೇಟಿಯ ನಂತರ ಡಾ. ದೇವಿಶೆಟ್ಟಿಯವರ ಜೊತೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಶಿವಾಜಿನಗರ ಕ್ಷೇತ್ರದಲ್ಲಿ ಬಡವರಿಗೆ ಚಿಕಿತ್ಸೆ ಒದಗಿಸುವ ಸಲುವಾಗಿ ನಾರಾಯಣ ಹೃದಯಾಲಯದ ಜೊತೆಗೂಡಿ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ ಎಂದರು.
ಈ ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಈಗಾಗಲೇ ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ರೂ. ವೆಚ್ಚ ಮಾಡಿದೆ ಎಂದು ಅವರು ಹೇಳಿದರು. ಈ ಆಸ್ಪತ್ರೆಗೆ ಡಾ. ದೇವಿಶೆಟ್ಟಿ ಅವರು 20 ಕೋಟಿಗೂ ಹೆಚ್ಚು ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯದ್ದಾಗಿದ್ದು. ಹೃದಯದ ಗಂಭೀರ ಸಮಸ್ಯೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಆಸ್ಪತ್ರೆಗೆ ನೆರವು ನೀಡುತ್ತಿರುವ ಡಾ. ದೇವಿಶೆಟ್ಟಿಯವರಿಗೆ ಧನ್ಯವಾದವನ್ನು ಸಚಿವ ರೋಷನ್ ಬೇಗ್ ಹೇಳಿದರು.

Comments are closed.