ಕರಾವಳಿ

ಬಿ. ವಿ. ಆಚಾರ್ಯರ ಹೇಳಿಕೆಯನ್ನು ಸಮರ್ಥಿಸಿದ ಪೂಜಾರಿ

Pinterest LinkedIn Tumblr

poojary_press_meet

ಮಂಗಳೂರು, ಸೆ. 16: ಮಾಜಿ ಅಡ್ವಕೇಟ್ ಜನರಲ್ ನ್ಯಾಯವಾದಿ ಬಿ. ವಿ. ಆಚಾರ್ಯರು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದರೆ ಅದು ತಪ್ಪಲ್ಲ ಎಂದು ನೀಡಿರುವ ಹೇಳಿಕೆಯನ್ನು ಸಮರ್ಥಿಸುವುದಾಗಿ ಕೇಂದ್ರದ ಮಾಜಿ ಸಚಿವ, ಎ‌ಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.

6. 5 ಕೋಟಿ ಜನರಿಗೆ ಕುಡಿಯಲು ನೀರಿಲ್ಲದಾಗ, ಸರ್ವೋಚ್ಛ ನ್ಯಾಯಾಲಯ ಕುಡಿಯಲು ನೀರು ಕೊಡಬೇಕೆಂದು ಹೇಳಿದರೆ, ನೀರಿಲ್ಲದ ಪರಿಸ್ಥಿತಿಯಲ್ಲಿ ನೀರನ್ನು ಎಲ್ಲಿಂದ ತರುವುದು. ತಮಿಳುನಾಡು ಸರಕಾರ ಕುಡಿಯಲು ನೀರಲ್ಲದೆ, ಮೂರು ಋತುಗಳ ಬೇಸಾಯಕ್ಕಾಗಿ ನೀರು ಕೇಳಿದಾಗ ಸರ್ವೋಚ್ಛ ನ್ಯಾಯಾಲಯ ನೀರು ಕೊಡಿ ಎಂದು ಹೇಳುವುದು ಎಷ್ಟು ಸರಿ.

ಮೇಕೆದಾಟು ಯೋಜನೆ ಮತ್ತು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿ ಎಂದು ತಮಿಳು ಸರಕಾರಕ್ಕೆ ಸರ್ವೋಚ್ಛ ನ್ಯಾಯಾ ಲಯ ನಿರ್ದೇಶನ ನೀಡಬೇಕು. ಬಹಳ ಅಚ್ಚರಿ ಎಂದರೆ ಈಗ ತಮಿಳುನಾಡು ಕೈಗಾರಿಕಾ ಉದ್ದೇಶಕ್ಕೂ ಈ ನೀರನ್ನು ಉಪಯೋಗಿಸಲು ಹೊರಟಿದೆ. ಇದು ಮಹಾ ಅನ್ಯಾಯ.ಸರ್ವೋಚ್ಛ ನ್ಯಾಯಾಲಯ ಇದನ್ನು ತಡೆಯಲು ನಿರ್ದೇಶನ ನೀಡಬೇಕು.

ಅದರೊಂದಿಗೆ ಮಹಾದಾಯಿ ಯೋಜನೆ, ಕಾವೇರಿ ನದಿ ಯೋಜನೆ, ನಾರಾಯಣಪುರ ಹಾಗು ಘಟಪ್ರಭಾ ಯೋಜನೆಗಳಿಂದ ಕರ್ನಾಟಕಕ್ಕೆ ಮಹಾ ಅನ್ಯಾಯವಾಗಿರುವುದರಿಂದ ಕೂಡಲೇ ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡುವ ಮೂಲಕ ಈ ಯೋಜನೆ ಅನುಷ್ಠಾನವನ್ನು ತಡೆ ಹಿಡಿಯಬೇಕು ಎಂದು ಪೂಜಾರಿ ತಿಳಿಸಿದ್ದಾರೆ.

Comments are closed.