ಕರ್ನಾಟಕ

ಕೆಪಿಎನ್ ಟ್ರಾವೆಲ್ಸ್ ಬಸ್ ಗಳಿಗೆ ಬೆಂಕಿ ಹಚ್ಚಿದ್ದ 7 ಮಂದಿ ಅರೆಸ್ಟ್

Pinterest LinkedIn Tumblr

kpn_bus_fire_ಬೆಂಗಳೂರು: ಕಾವೇರಿ ನದಿ ನೀರು ಸಂಬಂಧ ಸುಪ್ರೀಂಕೋರ್ಟ್ ನ ತೀರ್ಪು ಹಾಗೂ ತಮಿಳುನಾಡಿಗೆ ನೀರ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆ ಸಂದರ್ಭದಲ್ಲಿ ಕೆಪಿಎನ್ ಬಸ್ ಗೆ ಬೆಂಕಿ ಹಚ್ಚಿದ್ದ 7 ಮಂದಿಯನ್ನು ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾವೇರಿ ವಿವಾದದ ಗಲಾಟೆ ವೇಳೆ ಬೆಂಗಳೂರು, ಮೈಸೂರು ರಸ್ತೆಯಲ್ಲಿದ್ದ ಕೆಪಿಎನ್ ಡಿಪೋಗೆ ನುಗ್ಗಿದ್ದ 7 ಮಂದಿ ಸುಮಾರು 35 ಬಸ್ ಗಳಿಗೆ ಬೆಂಕಿಹಚ್ಚಿದ್ದರು. ಸಿಸಿಟಿವಿ ಫೂಟೇಜ್ ಪರಿಶೀಲನೆ ಬಳಿಕ ಆರೋಪಿಗಳನ್ನು ಪತ್ತೆಹಚ್ಚಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಿತ್ (18), ಸತೀಶ್ (27) ಕೆಂಪೇಗೌಡ (28), ಪ್ರಕಾಶ್ (46), ಲೋಕೇಶ್ (25), ಚಂದನ್ ಬಂಧಿತರಾಗಿದ್ದು, ಇವರೆಲ್ಲರೂ ಡಿಸೋಜಾ ನಗರ ವೀರ ಭದ್ರನಗರ ನಿವಾಸಿಗಳಾಗಿದ್ದು ಪೀಣ್ಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು ಮಾಧ್ಯಮದ ವರದಿ ವಿವರಿಸಿದೆ.

-ಉದಯವಾಣಿ

Comments are closed.