ಕರ್ನಾಟಕ

ನಟ ದರ್ಶನ್, ಶಾಮನೂರರಿಂದ ಒತ್ತುವರಿ ಸಾಬೀತು!

Pinterest LinkedIn Tumblr

darshan

ಬೆಂಗಳೂರು: ಚಿತ್ರನಟ ದರ್ಶನ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆಯಿಂದ ಅಕ್ರಮ ಒತ್ತುವರುವುದು ಸಾಬೀತಾಗಿದೆ.

ರಾಜರಾಜೇಶ್ವರಿ ನಗರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಿರ್ಣಾಯಕ ಘಟ್ಟ ತಲುಪಿದ್ದು, ಪ್ರತಿಷ್ಥಿತರ ಪ್ರದೇಶಗಳ ಮರು ಸರ್ವೇ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಗಣ್ಯರು ಕೂಡ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಸರ್ವೇ ಕಾರ್ಯದಿಂದ ಬೆಳಕಿಗೆ ಬಂದಿದೆ.

ದರ್ಶನ್ ಅವರ ‘ತೂಗುದೀಪ ನಿಲಯ’ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ‘ಎಸ್‌ಎಸ್ ಆಸ್ಪತ್ರೆಯಿಂದ ಒತ್ತುವರಿಯಾಗಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಅದಕ್ಕೆ ವರದಿಯಲ್ಲಿ ಸ್ಪಷ್ಟನೆ ನೀಡಿರುವ ಭೂದಾಖಲೆಗಳ ಜಂಟಿ ನಿರ್ದೇಶಕರು, ದರ್ಶನ್ ಮನೆಯಿಂದ ೨ ಗುಂಟೆ ಭೂಮಿ ಹಾಗೂ ಎಸ್‌ಎಸ್ ಆಸ್ಪತ್ರೆಯಿಂದ ೨೨ ಗುಂಟೆ ರಾಜಕಾಲುವೆ ಜಾಗ ಒತ್ತುವರಿ ಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ದಾಖಲೆಗಳ ಜಂಟಿ ನಿರ್ದೇಶಕರು ಸೆಪ್ಟೆಂಬರ್ ೮ ರಂದು ಆಯುಕ್ತರಿಗೆ ಸಲ್ಲಿಸಿರುವ ವರದಿಯಂತೆ, ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಹಲಗೇವಡೇರಹಳ್ಳಿ ಗ್ರಾಮದ ಸರ್ವೇ ನಂ.೩೮ರಿಂದ ೪೧, ೪೩ರಿಂದ ೪೭ ಹಾಗೂ ೫೧ರಿಂದ ೫೬ರವರೆಗಿನ ಆಸ್ತಿಗಳ ಸರ್ವೇ ನಡೆಸಲಾಗಿದೆ. ಅದರಲ್ಲಿ ಕಂದಾಯ ಇಲಾಖೆ ದಾಖಲೆಗಳಲ್ಲಿರುವಂತೆ ಹದ್ದಿಗಿಡಿದ ಹಳ್ಳ ಸೇರಿ ಒಟ್ಟು ೧೫ ಸರ್ವೇ ಸಂಖ್ಯೆಯಲ್ಲಿರುವ ಆಸ್ತಿಗಳಿಂದ ೭.೩೧ ಎಕರೆ ವಿಸ್ತೀರ್ಣದ ರಾಜಕಾಲುವೆ ಜಾಗ ಒತ್ತುವರಿಯಾಗಿದೆ ಎಂದು ಹೇಳಿದ್ದಾರೆ.

Comments are closed.