ರಸ್ತೆಯಲ್ಲಿ ಹೋಗುತ್ತಿದ್ದಾಗ ಪ್ರೀತಿಸು ಎಂದು ಟಾರ್ಚರ್ ನೀಡುತ್ತಿದ್ದ ಯುವಕನ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿನಿಯೊಬ್ಬಳು ಆತನಿಗೆ ಚಪ್ಪಲಿ ಏಟು ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಬರೇಲಿಯ ಸಜ್ನಾ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಪ್ರತಿದಿನವೂ ತನ್ನನ್ನು ಪ್ರೀತಿಸುವಂತೆ ಕಾಡುತ್ತಿದ್ದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಪುಡಾರಿ ಯುವಕನ ಪುಂಡಾಟಕ್ಕೆ ಬೇಸತ್ತ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಚಪ್ಪಲಿಯಿಂದ ಚೆನ್ನಾಗಿ ಥಳಿಸಿದ್ದಾಳೆ.
ಘಟನೆ ನಡೆದ ದಿನವೂ ಯುವಕ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನ ಅಡ್ಡಹಾಕಿ ಪ್ರೇಮ ನಿವೇದನೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯಾಕೆ ತನ್ನ ಸಹಾಯಕ್ಕೆಂದು ಜೋರಾಗಿ ಕೂಗಿದ್ದಾಳೆ. ತಕ್ಷಣ ಆಕೆಯ ಸಹಾಯಕ್ಕೆ ಕೆಲ ಮಂದಿ ಬಂದಿದ್ದಾರೆ. ನಂತರ ತನ್ನ ಚಪ್ಪಲಿಯಿಂದ ಆತನಿಗೆ ಥಳಿಸಿದ್ದಾಳೆ, ಕೊನೆಗೆ ಪೊಲೀಸರಿಗೆ ಆತನನ್ನ ನೀಡಲಾಗಿದೆ.
Comments are closed.