
ಮಂಗಳೂರು, ಸೆ.14: ‘ನಮ್ಮ ಆಯಂಬ್ಯುಲೆನ್ಸ್ ಜನರ ಸೇವೆಗೆ’ ಎಂಬ ಧ್ಯೇಯವಾಕ್ಯದಡಿ ತುಳುನಾಡ ರಕ್ಷಣಾ ವೇದಿಕೆ (ತುರವೇ)ಯು ನೂತನವಾಗಿ ಆರಂಭಿಸಿರುವ ಆಯ್ಯಂಬ್ಯುಲೆನ್ಸ್ ಸೇವೆಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮಂಗಳೂರು ಉಪ ಪೊಲೀಸ್ ಆಯುಕ್ತ ಕೆ.ಎಂ.ಶಾಂತರಾಜು ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬ್ಯಾಂಕ್ ಸಾಲ ಮತ್ತು ಸ್ವಂತ ನಿಧಿಯನ್ನು ಬಳಸಿ ಆಯಂಬುಲೆನ್ಸ್ ಸೇವೆ ನೀಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ವಹಿಸಿದ್ದರು.



ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮನಪಾ ಸದಸ್ಯ ಲತೀಫ್ ಕಂದಕ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಸಂತೋಷ್ ಕುಮಾರ್ ಬೋಳಿಯಾರ್, ಆರೋಗ್ಯ ಇಲಾಖೆಯ ಅಧಿಕಾರಿ ರಾಜೇಶ್, ತುರವೆ ಮುಖಂಡರಾದ ಹಮೀದ್ ಹಸನ್ ಮಾಡೂರು, ಸಿರಾಜ್ ಅಡ್ಕರೆ, ಪ್ರಶಾಂತ ಭಟ್ ಕಡಬ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
Comments are closed.