
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಆರ್ ಜೆಡಿ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು ಮಹಾ ಮೈತ್ರಿಯಿಂದ ಹೊರಬರುವ ಎಚ್ಚರಿಕೆ ನೀಡಿದೆ.
ನಿತೀಶ್ ಕುಮಾರ್ ಅವರ ಬಗ್ಗೆ ಆಕ್ಷೇಪ ಅಥವಾ ಸಮಸ್ಯೆ ಇದ್ದರೆ ಆರ್ ಜೆಡಿ ಪಕ್ಷ ಮಹಾಮೈತ್ರಿಯಿಂದ ಹೊರಹೋಗುವುದನ್ನು ಸ್ವಾಗತಿಸುತ್ತೇವೆ ಎಂದು ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಹೇಳಿದ್ದಾರೆ. ಬಿಹಾರದಲ್ಲಿ ಜೆಡಿಯು ನೇತೃತ್ವದ ಆರ್ ಜೆಡಿ, ಕಾಂಗ್ರೆಸ್ ನ ಮೈತ್ರಿ ಸರ್ಕಾರವಿದ್ದು ಆರ್ ಜೆಡಿ ಇತ್ತೀಚಿನ ದಿನಗಳಲ್ಲಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ.
ಸರ್ಕಾರದ ಭಾಗವಾಗಿದ್ದುಕೊಂಡು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುವುದು ಸರಿಯಲ್ಲ ಎಂದು ಅಶೋಕ್ ಚೌಧರಿ ಹೇಳಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಆರ್ ಜೆಡಿ ನಾಯಕರಾದ ರಘುವಂಶ್ ಪ್ರಸಾದ್ ಸಿಂಗ್ ಹಾಗೂ ಮೊಹಮ್ಮದ್ ಶಾಹಾಬುದ್ದೀನ್ ನಿತೀಶ್ ಕುಮಾರ್ ನ್ನು ಅವಕಾಶವಾದಿ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದ್ದರು.
Comments are closed.