ರಾಷ್ಟ್ರೀಯ

ಇನ್ನೇನಿದ್ದರೂ ವೀಡಿಯೋ ಚಾಟಿಂಗು ಎಲ್ಲೇ ಇರಿ,ಹೇಗೇ ಇರಿ, ಮಾತಾಡ್ತಾ ಇರಿ

Pinterest LinkedIn Tumblr

facebook-messenger2

ಜಗತ್ತು ಬದಲಾಗಿದೆ. ಎಲ್ಲಾ ನೆಟ್‌ವರ್ಕ್‌ಗಳೂ ಹೈಸ್ಪೀಡ್‌ ಇಂಟರ್‌ನೆಟ್‌ ದೊರಕಿಸುವ ಭರವಸೆ ನೀಡುತ್ತಿವೆ. ರಿಲಯನ್ಸ್‌ ಜಿಯೋ ಬಂದ ಮೇಲೆ ಬೇರೆ ನೆಟ್‌ವರ್ಕ್‌ನವರೂ ಅಲರ್ಟ್‌ ಆಗಿದ್ದಾರೆ. ಕಡಿಮೆ ಬೆಲೆಗೆ ಡಾಟಾ ಪ್ಯಾಕ್‌ ಆಫ‌ರ್‌ ಒದಗಿಸುತ್ತಿದ್ದಾರೆ. ಹಾಗಾಗಿ ದೂರದೂರ ಇರುವ ಬಂಧುಗಳು, ಫ್ರೆಂಡ್ಸ್‌ಗಳ ಜೊತೆ ಇನ್ನು ಆರಾಮಾಗಿ ಮಾತಾಡಬಹುದು. ವೀಡಿಯೋ ಕಾಲಿಂಗ್‌ ಮಾಡಿದರೆ ಅವರನ್ನು ನೋಡ್‌ನೋಡ್ತಾ ಕೀಟಲೆ ಮಾಡ್ತಾ ಮಾತುಕತೆ ನಡೆಸಬಹುದು.

ಈ ಮೊದಲು ವೀಡಿಯೋ ಕಾಲಿಂಗ್‌ ಮಾಡಬೇಕಾದರೆ ಸ್ಕೈಪ್‌ನ ಮೊರೆ ಹೋಗಬೇಕಾಗಿತ್ತು. ಆದರೆ ಈಗ ಬೇರೆ ಬೇರೆ ಆ್ಯಪ್‌ಗ್ಳೂ ವೀಡಿಯೋ ಕಾಲಿಂಗ್‌ ಅವಕಾಶ ಒದಗಿಸುತ್ತವೆ. ಹೈಸ್ಪೀಡ್‌ ಇಂಟರ್‌ನೆಟ್‌ ಕೂಡ ಇದೆ, ಹಾಗಾಗಿ ತುಂಬಾ ಸುಲಭವಾಗಿ ವೀಡಿಯೋ ಕಾಲಿಂಗ್‌ ಮಾಡಬಹುದು. ಯಾರಾದರೂ ಸುಳ್ಳು ಹೇಳುತ್ತಿದ್ದಾರೆ ಅಂತನ್ನಿಸಿದ ತಕ್ಷಣ ವೀಡಿಯೋ ಕಾಲಿಂಗ್‌ ಮಾಡಿದರೆ ತಕ್ಷಣ ಸತ್ಯ ಗೊತ್ತಾಗುತ್ತದೆ ಅನ್ನುವುದು ಕೂಡ ಬಳಕೆದಾರರು ಗಮನದಲ್ಲಿರಿಸಿಕೊಳ್ಳತಕ್ಕದ್ದು.

ಸುಲಭವಾಗಿ ವೀಡಿಯೋ ಕಾಲಿಂಗ್‌ ಮಾಡಬಹುದಾದ 3 ಆ್ಯಪ್‌ಗ್ಳ ಪರಿಚಯ ಇಲ್ಲಿದೆ.

ಟ್ಯಾಂಗೋ
ಫ್ರೀ ವೀಡಿಯೋ ಕಾಲಿಂಗ್‌ ಒದಗಿಸುವ ಆ್ಯಪ್‌ ಇದು. ಈ ಆ್ಯಪ್‌ನಲ್ಲಿ ನೀವು ನಿಮ್ಮ ಫ್ರೆಂಡ್ಸ್‌ ಜೊತೆ ಎಷ್ಟು ಬೇಕಾದರೂ ಚಾಟ್‌ ಮಾಡಬಹುದು. ಇದರಲ್ಲಿರುವ ಇಂಟರೆಸ್ಟಿಂಗ್‌ ಫೀಚರ್‌ ಅಂದ್ರೆ ಬೇರೆ ಸೋಷಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ಗಳಲ್ಲಿರುವ ಫ್ರೆಂಡ್‌ಗಳನ್ನು ನೀವು ಇಲ್ಲಿ ಸುಲಭವಾಗಿ ಕನೆಕ್ಟ್ ಆಗಬಹುದು ಮತ್ತು ಅವರ ಜೊತೆ ವೀಡಿಯೋ ಚಾಟ್‌ ನಡೆಸಬಹುದು. ದೂರದ ಊರಲ್ಲಿರುವವರು, ಎಲ್ಲೋ ಇರುವ ಎಫ್ಬಿ ಫ್ರೆಂಡುÕ ಹೀಗೆ ಮನಸಿಗೆ ಹತ್ತಿರ ಇರುವವರ ಜೊತೆ ಮಾತಾಡಿ ಖುಷಿ ಪಡುವ ಅವಕಾಶವನ್ನು ಈ ಆ್ಯಪ್‌ ಒದಗಿಸುತ್ತದೆ. 4ಜಿ ಇರುವ ಮೊಬೈಲ್‌ನಲ್ಲಿ ಸರಾಗವಾಗಿ ಗಂಟೆಗಟ್ಟಲೆ ಮಾತಾಡಬಹುದು. ಅದಲ್ಲದೇ ಫೋಟೋ ಕಳಿಸಬಹುದು. ಆಡಿಯೋ ಕ್ಲಿಪ್‌ ಕಳಿಸಬಹುದು. ಟೆû…$r ಮೆಸೇಜ್‌ ಕೂಡ ಕಳಿಸಬಹುದು. ಆಸಕ್ತಿ ಇರುವವರು ಒಂದ್ಸಲ ಟ್ರೈ ಮಾಡಬಹುದು.

ಗೂಗಲ್‌ ಡ್ಯುಯೋ
ಯೂಸರ್‌ ಫ್ರೆಂಡ್ಲಿ ಆ್ಯಪ್‌ ಇದು. ಆ್ಯಂಡ್ರಾಯ್ಡ ಮತ್ತು ಐಫೋನ್‌ನಲ್ಲಿ ಸುಲಭವಾಗಿ ಕೆಲಸ ಮಾಡುತ್ತದೆ. ನಿಮಗೆ ಯಾರ ಜೊತೆಯಾದರೂ ವೀಡಿಯೋ ಕಾಲ್‌ ಮಾಡಿ ಮಾತಾಡಬೇಕು ಅಂತನ್ನಿಸಿದರೆ ಆ್ಯಪ್‌ನಲ್ಲಿರುವ ವೀಡಿಯೋ ಕಾಲ್‌ ಬಟನ್‌ ಕ್ಲಿಕ್‌ ಮಾಡಿದರೆ ಸಾಕು ನಿಮ್ಮ ಫೋನ್‌ ಕಾಂಟಾಕ್ಟ್ ಲಿಸ್ಟ್‌ ತೋರಿಸುತ್ತದೆ. ಅದರಲ್ಲಿ ನಿಮಗೆ ಬೇಕಾದವರಿಗೆ ಕಾಲ್‌ ಮಾಡಬಹುದು. ಆದರೆ ನೀವು ಕಾಲ್‌ ಮಾಡುವ ವ್ಯಕ್ತಿಯ ಮೊಬೈಲಲ್ಲೂ ಈ ಗೂಗಲ್‌ ಡ್ಯುಯೋ ಆ್ಯಪ್‌ ಇರಬೇಕು. ಇಲ್ಲದಿದ್ದರೆ ವೀಡಿಯೋ ಚಾಟ್‌ ಸಾಧ್ಯವಿಲ್ಲ. ಇಲ್ಲಿ ನಿಮಗೆ ಬೇರೆ ಯಾರಿಂದಲೋ ಕಾಲ್‌ ಬಂದರೆ ಯಾರಿಂದ ಕಾಲ್‌ ಬಂದಿದೆ ಅಂತ ಗೊತ್ತಾಗುತ್ತದೆ. ಇಷ್ಟವಿದ್ದರೆ ಮಾತಾಡಬಹುದು. ನೋಡಬೇಕು ಅಂತನ್ನಿಸಿದ ತಕ್ಷಣ ನೋಡಬಹುದು. ಇನ್ನು ಹೆಣ್ಮಕ್ಕಳಿಗಂತೂ ಈ ಆ್ಯಪ್‌ನಿಂದ ತುಂಬಾನೇ ಅನುಕೂಲ. ತನ್ನ ಬಾಯ್‌ಫ್ರೆಂಡ್‌ ಸುಳ್ಳು ಹೇಳುತ್ತಿದ್ದಾನೆ ಅಂತನ್ನಿಸಿದ ತಕ್ಷಣ ವೀಡಿಯೋ ಕಾಲ್‌ ಮಾಡಿ ನಿಜವಾದ ಸ್ಥಳವನ್ನು ಪತ್ತೆ ಮಾಡಬಹುದು.

ಫೇಸ್‌ಬುಕ್‌ ಮೆಸೆಂಜರ್‌
ಈಗ ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಈ ಆ್ಯಪ್‌ ಅಂತೂ ಇದ್ದೇ ಇದೆ. ಹಾಗಾಗಿ ಫೇಸ್‌ಬುಕ್‌ನಲ್ಲಿರುವ ಫ್ರೆಂಡ್ಸ್‌ ಜೊತೆ ವೀಡಿಯೋ ಚಾಟ್‌ ಮಾಡಬೇಕು ಅಂತನ್ನಿಸಿದರೆ ಇಲ್ಲೇ ವೀಡಿಯೋ ಚಾಟ್‌ ಮಾಡಬಹುದು. ಫೇಸ್‌ಬುಕ್‌ ಫ್ರೆಂಡ್ಸ್‌ ಲಿಸ್ಟೆಲ್ಲಾ ತೋರಿಸುತ್ತದೆ. ಯಾರಿಗೆ ಬೇಕೋ ಅವರಿಗೆ ವೀಡಿಯೋ ಕಾಲ್‌ ಮಾಡಬಹುದು. ಈ ಆ್ಯಪ್‌ ವಿಶೇಷತೆ ಅಂದ್ರೆ ನೀವು ಟೆû…$r ಚಾಟ್‌ ಕೂಡ ಮಾಡಬಹುದು. ವೀಡಿಯೋ ಚಾಟ್‌ ಕೂಡ ಮಾಡಬಹುದು. ನೀವು ಬೇರೆ ಆ್ಯಪ್‌ಗ್ಳ ಮೊರೆ ಹೋಗುವುದಿಲ್ಲ ಅಂದ್ರೆ ಈ ಫೇಸ್‌ಬುಕ್‌ ಮೆಸೆಂಜರ್‌ ಬೆಸ್ಟು. ಯಾಕೆಂದರೆ ಎಲ್ಲರ ಮೊಬೈಲಲ್ಲೂ ಈ ಆ್ಯಪ್‌ ಇರುತ್ತದೆ. 4ಜಿ ಬಂದ ಮೇಲಂತೂ ಈ ಆ್ಯಪ್‌ನಲ್ಲಿ ವೀಡಿಯೋ ಚಾಟಿಂಗ್‌ ತುಂಬಾ ಸುಲಭವಾಗಿಬಿಟ್ಟಿದೆ ಅಂದ್ರೇ ಅತಿಶಯೋಕ್ತಿ ಏನಲ್ಲ.

– ಸ್ಮಾರ್ಟ್‌ಮ್ಯಾನ್‌

-ಉದಯವಾಣಿ

Comments are closed.