
ಮಂಡ್ಯ: ತಮಿಳುನಾಡಿಗೆ ನೀರು ಹರಿಯಲು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ಮುಂದುವರಿದಿದೆ. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆದಿದ್ದು, ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಪ್ರತಿಭಟನೆ ಮುಂದುವರಿದಿರುವ ಹೊತ್ತಿನಲ್ಲೇ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿರುವ ಘಟನೆಯನ್ನು ಖಂಡಿಸಿ ಪಾಂಡವಪುರದಲ್ಲಿ ಗ್ರಾಮಸ್ಥರು 6 ಅಂಗಡಿಗಳನ್ನು ಧ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ.
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪಾಂಡವಪುರದಲ್ಲಿ ಅಘೋಷಿತ ಬಂದ್ ಘೋಷಿಸಲಾಗಿದೆ.
ಮದ್ದೂರಿನಲ್ಲಿ ಕಾರು ಭಸ್ಮ!
ಮದ್ದೂರು ಗೆಜ್ಜಲಗೆರೆ ಬಳಿ ತಮಿಳುನಾಡಿಗೆ ಸೇರಿದ ಬೊಲೆರೋ ಕಾರಿಗೆ ಗ್ರಾಮಸ್ಥರಿಂದ ಬೆಂಕಿ. ಸಂಪೂರ್ಣ ಸುಟ್ಟು ಭಸ್ಮವಾದ ಕಾರು.
Comments are closed.