ಬೆಂಗಳೂರು: ಕಾವೇರಿ ಪ್ರತಿಭಟನೆ ತೀವ್ರವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಸಂಜೆ 5ರಿಂದ ಐಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಆದೇಶಿಸಿದ್ದಾರೆ. ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ವಿನಂತಿಸಿದ್ದಾರೆ.
‘ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಎಸ್. ಮೇಘರಿಕ್ ಅವರು ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ನಿಷೇಧಾಜ್ಞೆಯನ್ನು ಜಾರಿ ಗೊಳಿಸಿರುತ್ತಾರೆ’ ಎಂದು ಬೆಂಗಳೂರು ಸಿಟಿ ಪೊಲೀಸ್ ಟ್ವೀಟ್ ಮಾಡಿದೆ.
2h
BengaluruCityPolice ✔ @BlrCityPolice
#CauveryIssue : As A Preventive Measures “NOW” #Section144 Prohibitory Order Has Been Clamped In Bengaluru City !! @CPBlr !! @CMofKarnataka
Follow
BengaluruCityPolice ✔ @BlrCityPolice
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಎಸ್.ಮೇಘರಿಕ್ ರವರು ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ #ಸೆಕ್ಷನ್144 ನಿಷೇದಾಜ್ಞೆಯನ್ನು ಜಾರಿ ಗೊಳಿಸಿರುತ್ತಾರೆ.
5:18 PM – 12 Sep 2016
49 49 Retweets 29 29 likes
ಈಮೊದಲು, ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಹಾಗೂ ಕೆಲವು ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂಬ ವದಂತಿ ಹರಡಿತ್ತು. ಆದರೆ, ಆಯುಕ್ತರು ಈ ರೀತಿಯ ಆದೇಶ ನೀಡಿಲ್ಲ. ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಜನರು ಶಾಂತಿ ಕಾಪಾಡಬೇಕೆಂದು ಎಂದು ಬೆಂಗಳೂರು ಸಿಟಿ ಪೊಲೀಸ್ ಟ್ವೀಟ್ ಮಾಡಿತ್ತು.
Comments are closed.