
ಮನುಷ್ಯರ ಬೆರಳು ಅವರ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ. ಕೈ ಬೆರಳಿನ ಗೆರೆಗಳು ಭಾಗ್ಯದ ಕನ್ನಡಿಯಾಗಿದೆ. ಹೀಗಿದ್ದರೆ ಪ್ರತಿಯೊಬ್ಬರೂ ಕೂಡಾ ತಾವು ತಮ್ಮ ಲೈಫ್ನಲ್ಲಿ ಯಾವಾಗ ಹಾಗೂ ಹೇಗೆ ಸಫಲತೆ ಪಡೆಯಬಹುದು ಎಂಬುದನ್ನು ತಿಳಿಯಲು ಇಷ್ಟಪಡುತ್ತಾರೆ ಅಲ್ಲವೇ..? ನೀವು ಅದನ್ನು ತಿಳಿಯಲು ಇಷ್ಟಪಟ್ಟಿದ್ದರೆ ನಿಮ್ಮ ಕಿರು ಬೆರಳನ್ನು ನೋಡಬೇಕು.
ಕಿರು ಬೆರಳು ಈ ರೀತಿಯಾಗಿ ನಿಮ್ಮ ಸಫಲತೆ ಬಗ್ಗೆ ಹೇಳುತ್ತದೆ. ಕಿರುಬೆರಳಿನ ಕೆಳಗೆ ಬುಧ ಪರ್ವತ ಇರುತ್ತದೆ. ಹಸ್ತರೇಖೆ ವಿಜ್ಞಾನದ ಪ್ರಕಾರ ಈ ಬುಧ ಪರ್ವತ ಎತ್ತರವಾಗಿದದ್ದು, ಅದರ ಮೇಲಿನ ಬುಧ ರೇಖೆ ಡಾರ್ಕ್ಆಗಿ, ನೇರವಾಗಿ, ಕೆಂಪು ಬಣ್ಣದಲ್ಲಿದ್ದರೆ ಇವರ ಕೈಯಲ್ಲಿ ಭದ್ರವಾದ ಯೋಗವಿರುತ್ತದೆ. ಇದು ನಿಮ್ಮ ಕೈಯಲ್ಲಿದ್ದರೆ ಅತ್ಯಂತ ಬುದ್ಧಿವಂತರು ನೀವಾಗುತ್ತೀರಿ. ನಿಮ್ಮ ಪ್ರಸಿದ್ಧಿಯಿಂದಲೇ ನೀವು ಧನ ಪ್ರಾಪ್ತಿಯಾಗುವಂತಹ ಕೆಲಸ ಮಾಡುತ್ತೀರಿ.
ನಿಮ್ಮ ಅಂಗೈಯ ಕಿರು ಬೆರಳು ಉಂಗುರ ಬೆರಳಿನ ಉಗುರಿನ ಬುಡದವರೆಗೆ ತಲುಪುವುದಾದರೆ ನೀವು ಅತ್ಯಂತ ಭಾಗ್ಯಶಾಲಿಯಾಗಿರುತ್ತೀರಿ. ನೀವು ನಿಮ್ಮ ಬುದ್ಧಿ ಮತ್ತು ಚಾತುರ್ಯದಿಂದಾಗಿ ನೌಕರಿ ಹಾಗೂ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅಲ್ಲದೇ ನಿಮಗೆ ಪ್ರಮೋಶನ್ಆಗುವ ಸಾಧ್ಯತೆ ಸಹ ಹೆಚ್ಚು ಇದೆ.
ಕಿರು ಬೆರಳಿನ ಬಗ್ಗೆ ಹಸ್ತ ರೇಖೆ ವಿಜ್ಞಾನ ಹೀಗೆ ಹೇಳುತ್ತದೆ ‘ಈ ಬೆರಳು ಎಷ್ಟು ಉದ್ದವಾಗಿರುತ್ತದೋ ಅಷ್ಟೇ ಭಾಗ್ಯಶಾಲಿಗಳಾಗುತ್ತೀರಿ ನೀವು. ಅಲ್ಲದೇ ಎಲ್ಲಾ ಕಾರ್ಯಗಳು ಶುಭವಾಗುತ್ತದೆ ಹಾಗೂ ಸಫಲತೆ ಪ್ರಾಪ್ತಿಯಾಗುತ್ತದೆ.
ಕಿರು ಬೆರಳು ಉಂಗುರ ಬೆರಳಿನ ಮೂರನೇ ಗೆರೆಕ್ಕಿಂತ ಮೇಲಿದ್ದರೆ ಅವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಇವರು ಮುಂದೆ ಆಡಳಿತಾತ್ಮಕ ಅಧಿಕಾರಿಯಾಗಿ ಸೇವೆ ಸಲ್ಲಿಸಲೂಬಹುದು.
ಕಿರುಬೆರಳಿನ ಕೆಳಗೆ ಬುಧ ಪರ್ವತ ಎತ್ತರವಾಗಿದದ್ದು, ಅದರ ಮೇಲಿನ ಬುಧ ರೇಖೆ ನೇರವಾಗಿ, ಕೆಂಪು ಬಣ್ಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ ನೀವು ಬುದ್ಧಿವಂತರಾಗಿದ್ದು ಕರಿಯರ್ಜೀವನದಲ್ಲಿ ನಿಧಾನವಾಗಿ ಪ್ರಗತಿ ಸಾಧಿಸುತ್ತಾ ಬರುತ್ತಾರೆ ಎಂದು ಹಸ್ತ ವಿಜ್ಞಾನ ತಿಳಿಸುತ್ತದೆ.
Comments are closed.