ರಾಷ್ಟ್ರೀಯ

ಆಪ್ ಶಾಸಕ ಅಮಾನುತುಲ್ಲಾ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Pinterest LinkedIn Tumblr

amanatulllah-khanನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ಒಂದಲ್ಲ ಒಂದು ರೀತಿಯ ಆರೋಪಗಳು ಕೇಳಿ ಬರುತ್ತಲೇ ಇವೆ. ಇದೀಗ ದೆಹಲಿ ಶಾಸಕ ಅಮಾನುತುಲ್ಲಾ ಖಾನ್ ಅವರ ವಿರುದ್ಧ ಲೈಂಗಿಕ ಕಿರುಕುಳ ಕೇಳಿ ಬಂದಿದೆ.

ಖಾನ್ ಅವರ ಸಂಬಂಧಿ ಎಂದು ಹೇಳುತ್ತಿರುವ 32ರ ಹರೆಯವ ಮಹಿಳೆಯೊಬ್ಬರು ಖಾನ್ ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ದೆಹಲಿಯ ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆದಾಗ್ಯೂ, ತನಗೂ ಆ ಮಹಿಳೆಗೂ ಯಾವುದೇ ಸಂಬಂಧ ಇಲ್ಲ ಎಂದು ಖಾನ್ ಆರೋಪ ನಿರಾಕರಿಸಿದ್ದಾರೆ.

ಆರೋಪ ಕೇಳಿ ಬಂದೊಡನೆ ದೆಹಲಿ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಖಾನ್ ರಾಜೀನಾಮೆ ನೀಡಿದ್ದಾರೆ. ಎರಡು ದಿನಗಳ ಹಿಂದಯಷ್ಟೇ ಖಾನ್ ಅವರ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿತ್ತು.

Comments are closed.