
ನವದೆಹಲಿ: ಟೂತ್ ಪೇಸ್ಟ್, ನೂಡಲ್ಸ್ ಇನ್ನಿತರ ದಿನಬಳಕೆಯ ವಸ್ತುಗಳನ್ನು ಪರಿಚಯಿಸಿರುವ ಬಾಬಾ ರಾಮದೇವ್ ಅವರ ಪತಂಜಲಿ ಬ್ರಾಂಡ್, ಇದೀಗ ದೇಸಿ ಜೀನ್ಸ್ ಸೇರಿದಂತೆ ಸಾಂಪ್ರದಾಯಿಕ ವಸ್ತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಸುದ್ದಿಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ ರಾಮದೇವ್, ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾ, ಯುರೋಪ್ ಮತ್ತು ಅಮೆರಿಕದಲ್ಲಿಯೂ ತಮ್ಮ ಹೊಸ ಉಡುಪುಗಳ ಮಾರುಕಟ್ಟೆಯನ್ನು ವಿಸ್ತರಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
ಯೋಗಾಭ್ಯಾಸ ಮಾಡಲು ಪತಂಜಲಿಯ ಉಡುಗೆಗಳನ್ನು ಯಾಕೆ ಮಾರುಕಟ್ಟೆಗೆ ಪರಿಚಯಿಸಬಾರದು ಎಂದು ನನ್ನ ಅನುಯಾಯಿಗಳು ಕೇಳುತ್ತಿದ್ದರು.ಯೋಗದ ಉಡುಗೆಗಳಷ್ಟೇ ಯಾಕೆ ಎಲ್ಲ ರೀತಿಯ ಪರಿಧಾನ್ (ಉಡುಗೆ)ಗಳನ್ನು ಯಾಕೆ ನಾವು ಮಾರುಕಟ್ಟೆಗೆ ಪರಿಚಯಿಸಬಾರದು ಎಂದು ನಾನು ಯೋಚಿಸಿದೆ. ಈ ಮೂಲಕ ದೇಶದ ಗಾರ್ಮೆಂಟ್ಸ್ ಮಾರುಕಟ್ಟೆಯಲ್ಲಿಯೂ ದೇಸಿ ಉತ್ಪನ್ನಗಳು ಸಿಗುವಂತಾಗುತ್ತದೆ.
ದೇಸಿ ಸೊಗಡಿನ ಉಡುಗೆಗಳೊಂದಿಗೆ ಆಧುನಿಕ ಉಡುಗೆಗಳನ್ನು ಪರಿಚಯಿಸುತ್ತಿರುವ ಬಾಬಾ ದೇಸಿ ಜೀನ್ಸ್, ಸಾಂಪ್ರದಾಯಿಕ ಉಡುಗೆಗಳ ವಿಭಿನ್ನ ಶ್ರೇಣಿ ಮೂಲಕ ಜಾಗತಿಕ ಮಟ್ಟದಲ್ಲಿ ವಸ್ತ್ರಲೋಕಕ್ಕೆ ಪ್ರವೇಶ ಮಾಡಲಿದ್ದಾರೆ.
Comments are closed.