ರಾಷ್ಟ್ರೀಯ

ಪಾಕ್ ಮೂಲದ ಹಿಂದೂ ಬಾಲಕಿಗೆ ದೆಹಲಿ ಶಾಲೆಯಲ್ಲಿ ಪ್ರವೇಶ ಕೊಡಿಸುವುದಾಗಿ ಸುಷ್ಮಾ ಭರವಸೆ

Pinterest LinkedIn Tumblr

madhu_sushmaನವದೆಹಲಿ: ಪಾಕಿಸ್ತಾನ ಮೂಲದ ಹಿಂದೂ ಬಾಲಕಿಗೆ ದೆಹಲಿಯ ಶಾಲೆಯಲ್ಲಿ ಪ್ರವೇಶ ಕೊಡಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಭರವಸೆ ನೀಡಿದ್ದಾರೆ.

ಮಧು ಎಂಬ ಬಾಲಕಿ ಪಾಕಿಸ್ತಾನದವಳು ಎಂಬ ಕಾರಣಕ್ಕೆ ದೆಹಲಿಯ ಶಾಲೆಯಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ಹೇಳಿ ಕೆಲ ದಿನಗಳ ಹಿಂದೆ ‘ದ ಹಿಂದೂ ಪತ್ರಿಕೆ’ ವರದಿ ಮಾಡಿತ್ತು.

ಇದರಂತೆ ಶುಕ್ರವಾರ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು ಶಾಲಾ ಪ್ರವೇಶಾತಿ ಕುರಿತಂತೆ ಸುದ್ದಿಯನ್ನು ನೋಡಿದ್ದೇನೆ. ಶನಿವಾರ ಸಂಜೆ 7 ಗಂಟೆಗೆ ಬಾಲಕಿಯನ್ನು ಭೇಟಿಯಾಗಲಿದ್ದೇನೆಂದು ಹೇಳಿದ್ದರು.

ಇದರಂತೆ ಬಾಲಕಿಯನ್ನು ನಿನ್ನೆ ಭೇಟಿ ಮಾಡಿರುವ ಸುಷ್ಮಾ ಸ್ವರಾಜ್ ಅವರು ದೆಹಲಿ ಶಾಲೆಯಲ್ಲಿ ಪ್ರವೇಶ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Madhu – I have read this story in the media. Pl see me at my residence tomorrow evening at 7 pm. https://t.co/JfxBCX2Vz8

— Sushma Swaraj (@SushmaSwaraj) September 9, 2016
Thanks for your story reg Madhu. @AkankshaJain11 @the_hindu pic.twitter.com/MfAgS9GKwx @Sushil_Verma9 @nistula @theAblaMard @DelhiConnect

— Sushma Swaraj (@SushmaSwaraj) September 10, 2016

Comments are closed.