ಉಡುಪಿ: ಕೋಟ ಪೊಲೀಸರಿಗೆ ಬಂದ ಖಚಿತ ವರ್ತಮಾನದಂತೆ ಸಿಬ್ಬಂದಿಗಳ ಜೊತೆಗೆ ಕೋಟ ಸಮೀಪದ ಕೋಡಿ-ಕನ್ಯಾನದ ಮನೆಯೊಂದರ ಶೆಡ್ಡ್ ಗೆ ತೆರಳಿ ತಪಾಸಣೆ ಮಾಡಿದ ವೇಳೆ ಎರಡು ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ ಘಟನೆ ಸೆ.11 ಭಾನುವಾರ ನಡೆದಿದೆ.
ಕೋಡಿ ಕನ್ಯಾನದಲ್ಲಿ ಈ ಘಟನೆ ನಡೆದಿದ್ದು ಶೆಡ್ಡ್ ಮಾಲೀಕನಾದ ಮುನೀರ್ ಸಮೇತ ಫಿರೋಝ್ ಹಾಗೂ ಅಸ್ಲಾಂ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಕೋಡಿ-ಕನ್ಯಾಣದ ಮನೆಯೊಂದರ ಕಾಂಪೋಂಡ್ ಒಳಗಿನ ಶೆಡ್ಡಿನೊಳಗೆ ಅಕ್ರಮವಾಗಿ ದನದ ಮಾಂಸ ಮಾಡಲಾಗುತ್ತಿದೆಯೆಂಬ ಖಚಿತ ವರ್ತಮಾನದ ಮೇರೆಗೆ ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ಕಬ್ಬಾಳರಾಜ್ ಅವರು ಭಾನುವಾರ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿದಾಗ ಆ ಶೆಡ್ಡಿನಲ್ಲಿ ಮೂವರು ಎರಡು ದನಗಳನ್ನು ಕಡಿದು ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರು ಮಾಂಸದ ಸಮೇತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಕೋಟ ಪೊಲೀಸರಾದ ಬಸವರಾಜ್, ಸತೀಶ್ ಹಂದಾಡಿ, ರಾಘವೇಂದ್ರ ಮೊದಲಾದವರಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Comments are closed.