ಕರಾವಳಿ

ನಕಲಿ ಖಾತೆ ತೆರೆದು ಕಟೀಲು ಬಗ್ಗೆ ಅಸಭ್ಯ ಕಮೆಂಟ್ಸ್, ಪೋಸ್ಟ್ ಮಾಡಿದ್ದ ಓರ್ವ ಆರೋಪಿ ಸೆರೆ

Pinterest LinkedIn Tumblr

arrest

ಮಂಗಳೂರು, ಸೆ.10: ಕಟೀಲು ದೇವಿಯನ್ನು ನಿಂದಿಸಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ಚಿಕ್ಕಮಗಳೂರಿನ ಕೊಪ್ಪ ನಿವಾಸಿ ಹನೀಫ್(22) ಎಂದು ಹೆಸರಿಸಲಾಗಿದೆ. ಈತ ವಿದೇಶದಲ್ಲಿರುವ ತನ್ನ ಸ್ನೇಹಿತರ ಪರವಾಗಿ ನಕಲಿ ಖಾತೆ ತೆರೆದು ಅದರಲ್ಲಿ ಅಶ್ಲೀಲ, ಅಸಭ್ಯ ಕಮೆಂಟ್ಸ್, ಪೋಸ್ಟ್ ಹಾಕುತ್ತಿದ್ದ ಎನ್ನಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಪುತ್ತೂರು, ಸುಳ್ಯ ಭಾಗದ ೧೫ರಷ್ಟು ಮಂದಿ ಯುವಕರು ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದು, ಅಲ್ಲಿಂದಲೇ ಈತನ ಮೂಲಕ ಸಮಾಜದಲ್ಲಿ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈತ ನೀಡಿದ ಮಾಹಿತಿಯನ್ನು ಆಧರಿಸಿ ಇನ್ನುಳಿದವರ ಪೂರ್ವಾಪರ ಪೊಲೀಸರಿಗೆ ಲಭಿಸಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕೊಪ್ಪದ ಹನೀಫ್ ಮಧ್ಯವರ್ತಿಯಾಗಿದ್ದು, ಈತನ ಮೂಲಕ ನಕಲಿ ಫೇಸ್‌ಬುಕ್ ಖಾತೆ ತೆರೆಯುತ್ತಿದ್ದ ಮತ್ತು ಅದರಲ್ಲಿ ಅವಮಾನಕಾರಿ ಪೋಸ್ಟ್ ಪ್ರಕಟಿಸುತ್ತಿದ್ದರು ಎನ್ನಲಾಗಿದೆ. ನಕಲಿ ಖಾತೆಗಳನ್ನು ತೆರೆದು ಒಂದೆರಡು ದಿನಗಳಲ್ಲಿ ಡಿಲೀಟ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ಇದಕ್ಕಾಗಿ ವಾಟ್ಸ್ ಆಪ್ ಮತ್ತು ಫೇಸ್‌ಬುಕ್ ಗ್ರೂಫ್ ಮಾಡಿಕೊಂಡು ಆ ಮೂಲಕ ವಿಷಯ ರವಾನಿಸುತ್ತಿದ್ದುದು ಬಯಲಾಗಿದೆ.

ಕಟೀಲು ದೇವರ ಅವಹೇಳನದ ವಿರುದ್ಧ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು. ಹನೀಫ್ ಬಂಧನದಿಂದ ಇನ್ನುಳಿದ ಆರೋಪಿಗಳ ಬಂಧನ ಸುಲಭವಾಗಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ವಿದೇಶದಲ್ಲಿ ಇರುವ ಕಾರಣ ಅವರ ಪತ್ತೆಗೆ ಕೇಂದ್ರದ ನೆರವು ಬೇಕಾಗುತ್ತದೆ. ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಕೇಂದ್ರದ ಅನುಮತಿ ಲಭಿಸಿದ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಬಂಧಿಸಬಹುದು ಎಂದು ಹೇಳಲಾಗಿದೆ.

Comments are closed.