ರಾಷ್ಟ್ರೀಯ

ಕೊಳೆಗೇರಿಯಲ್ಲಿ 9 ವರ್ಷದ ಗ್ರಂಥಪಾಲಕಿ!

Pinterest LinkedIn Tumblr

hududududgiಭೋಪಾಲ್: ಭೋಪಾಲ್‌ನ ಕೊಳೆಗೇರಿ ಪ್ರದೇಶದ ಸಮೀಪ ವಾಸವಾಗಿರುವ ಮೂರನೇ ತರಗತಿ ವಿದ್ಯಾರ್ಥಿನಿ ಈಗ ಗ್ರಂಥಪಾಲಕಿ!

ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರವಾಗಿದ್ದು ನೀವು ಇಡೀ ಜಗತ್ತನ್ನು ಬದಲಿಸಲು ಇದನ್ನು ಬಳಸಬಹುದು ಎಂಬ ನೆಲ್ಸನ್ ಮಂಡೇಲಾರ ಮಾತನ್ನು ಬಾಲಕಿ ಮುಸ್ಕಾನ್ ಅಹಿರ್ವಾರ್ ಕಾರ್ಯಗತಗೊಳಿಸುತ್ತಿದ್ದಾಳೆ.

ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಕಾನ್ ತಾನು ಸಂಗ್ರಹಿಸಿದ್ದ 121 ಪುಸ್ತಕಗಳ ಮೂಲಕ ಕೊಳೆಗೇರಿಯಲ್ಲಿ ಪುಟ್ಟ ಗ್ರಂಥಾಲಯವನ್ನು ಪ್ರಾರಂಭಿಸಿದ್ದಾಳೆ. ದಿನೇ ದಿನೆ ಪುಸ್ತಕಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ನಿತ್ಯ 50 ವಿದ್ಯಾರ್ಥಿಗಳು ಈ ಗ್ರಂಥಾಲಯದ ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ಕೊಳೆಗೇರಿಯ ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ.

ನೀತಿ ಆಯೋಗವು ಮುಸ್ಕಾನ್‌ಗೆ ದೆಹಲಿಯಲ್ಲಿ ‘ಥಾಟ್ ಲೀಡರ್’ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚಿನ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸಿರುವ ಸಾಕ್ಷಿ ಮಲ್ಲಿಕೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಭಾರತ ಬದಲಿಸುತ್ತಿರುವ ಮಹಿಳೆಯರು ಅಭಿಯಾನದಡಿ ಈ ಪ್ರಶಸ್ತಿ ನೀಡಲಾಗಿದೆ.
*
‘ನಾನು ಮಾಡುವ ಕೆಲಸ ನನಗೆ ಮತ್ತು ನನ್ನ ಸ್ನೇಹಿತರು, ಮನೆಯವರು ಎಲ್ಲರಿಗೂ ಸಂತೋಷ ತಂದಿದೆ. ನನಗೆ ವೈದ್ಯಳಾಗುವ ಕನಸಿದೆ’
– ಮುಸ್ಕಾನ್ ಅಹಿರ್ವಾರ್

Comments are closed.