ರಾಷ್ಟ್ರೀಯ

ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೆಂಗ್ಯೂ ಪೀಡಿತ 21ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರ

Pinterest LinkedIn Tumblr

arrest

ಗಾಂಧಿನಗರ, ಗುಜರಾತ್‌: ಇಲ್ಲಿನ ಅಪೋಲೋ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೆಂಗ್ಯೂ ಪೀಡಿತ 21ರ ಹರೆಯದ ಮಹಿಳಾ ರೋಗಿಯೋರ್ವರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೊಲೀಸರು ಡಾಕ್ಟರ್‌ಒಬ್ಬರನ್ನು ಬಂಧಿಸಿದ್ದಾರೆ.

ಡೆಂಗ್ಯೂ ಪೀಡಿತ ಮಹಿಳೆಯನ್ನು ಕಳೆದ ಶನಿವಾರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯ ದೇಹಾರೋಗ್ಯ ಹದಗೆಡುತ್ತಿದ್ದುದನ್ನು ಅನುಸರಿಸಿ ಆಕೆಯನ್ನು ಐಸಿಯು ಗೆ ವರ್ಗಾಯಿಸಲಾಗಿತ್ತು.

ರಾತ್ರಿ ಪಾಳಿಯಲ್ಲಿದ್ದ ಆರೋಪಿ ವೈದ್ಯನು ನನ್ನ ಮೇಲೆ ಭಾನುವಾರ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆಯು ದೂರಿದ್ದಾಳೆ. ಅತ್ಯಾಚಾರಕ್ಕೆ ಮುನ್ನ ಆರೋಪಿ ವೈದ್ಯನು ನನಗೆ ಯಾವುದೋ ಔಷಧಿಯನ್ನು ಕೊಟ್ಟಿದ್ದ; ಅದರಿಂದಾಗಿ ನಾನು ಪ್ರಜ್ಞಾಹೀನಳಾದೆ ಎಂದು ಮಹಿಳಾ ರೋಗಿ ಹೇಳಿದ್ದಾಳೆ.

ವೈದ್ಯನಿಂದ ನಡೆಯಿತೆನ್ನಲಾಗಿರುವ ಈ ಅತ್ಯಾಚಾರ ಪ್ರಕರಣದಲ್ಲಿ ವಾರ್ಡ್‌ಬಾಯ್‌ಕೂಡ ಶಾಮೀಲಾಗಿರುವುದನ್ನು ಶಂಕಿಸಲಾಗಿದ್ದು ಆತನನ್ನೂ ಪೊಲೀಸರು ಬಂಧಿಸಿದ್ದಾರೆ.

ಮಹಿಳಾ ರೋಗಿಯ ವೈದ್ಯಕೀಯ ತಪಾಸಣೆ ನಡೆಸಲಾಗಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಅತ್ಯಾಚಾರಕ್ಕೆ ಗುರಿಯಾದ ಮಹಿಳಾ ರೋಗಿಗೆ ಅಮಲು ಬರುವಂತೆ ಓವರ್‌ಡೋಸ್‌ಮದ್ದು ನೀಡಲಾಗಿತ್ತು. ಹಾಗಾಗಿ ತನ್ನ ಮೇಲೆ ನಡೆದಿದ್ದ ಅತ್ಯಾಚಾರವನ್ನು ನಿನ್ನೆ ಗುರುವಾರವಷ್ಟೇ ಬಹಿರಂಗ ಪಡಿಸಲು ಆಕೆಗೆ ಸಾಧ್ಯವಾಯಿತೆಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಅತ್ಯಾಚಾರಿ ಡಾಕ್ಟರ್‌ವಿರುದ್ಧ ಐಪಿಸಿ ಸೆ.376 (ಸಿ) (ಡಿ) ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸರಿಗೆ ಈ ಅತ್ಯಾಚಾರ ತನಿಖೆಗೆ ನೆರವಾಗುವುದಕ್ಕಾಗಿ ಸಿಸಿಟಿವಿ ಚಿತ್ರಿಕೆಯ ದಾಖಲೆಗಳನ್ನು ಒದಗಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಡೆಂಗ್ಯೂ ಪೀಡಿತ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ದಿನದ 24 ತಾಸು ಕೆಲಸ ಮಾಡುವ 14 ಸಿಬಂದಿಗಳು ಕರ್ತವ್ಯ ನಿರತರಾಗಿದ್ದರು. ಈ ಆಸ್ಪತ್ರೆಯು ಸಂಪೂರ್ಣವಾಗಿ ಸಿಸಿಟಿವಿ ವಿಚಕ್ಷಣೆಗೆ ಒಳಪಟ್ಟಿದೆ. ಸಿಸಿಟಿವಿ ದಾಖಲೆಗಳನ್ನು ಪೊಲೀಸರಿಗೆ ಒದಗಿಸಲಾಗಿದ್ದು ತನಿಖೆಯಲ್ಲಿ ಅವರಿಗೆ ಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ಪಿಆರ್‌ಓ ಅಂಕಿತ್‌ಹಿಂಗು ಹೇಳಿಕೆ ನೀಡಿದ್ದಾರೆ.

Comments are closed.