ಮನೋರಂಜನೆ

ಹಳೇ ಹೆಸರು; ಹೊಸ ಚಿತ್ರ: ಶರಣ್‌ ಈಗ “ಸತ್ಯ ಹರಶ್ಚಿಂದ್ರ’

Pinterest LinkedIn Tumblr

saranಕೆ. ಮಂಜು ನಿರ್ಮಾಣದ ಒಂದು ಚಿತ್ರದಲ್ಲಿ ಶರಣ್‌ ನಟಿಸಬಹುದು ಎಂಬ ಸುದ್ದಿ ಇದ್ದೇ ಇತ್ತು. ಅದೀಗ ಖಾತ್ರಿಯಾಗಿದೆ. ಕೆ. ಮಂಜು ನಿರ್ಮಾಣದಲ್ಲಿ, ದಯಾಳ್‌ ನಿರ್ದೇಶನದಲ್ಲಿ ಶರಣ್‌ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಸತ್ಯ ಹರಿಶ್ಚಂದ್ರ’ ಎಂಬ ಹೆಸರನ್ನು ಇಡಲಾಗಿದೆ.

ಕನ್ನಡದಲ್ಲಿ 60ರ ದಶಕದಲ್ಲಿ ಡಾ. ರಾಜಕುಮಾರ್‌ ಅಭಿನಯದಲ್ಲಿ ರಾಜ ಹರಿಶ್ಚಂದ್ರ ಕುರಿತಾಗಿ “ಸತ್ಯ ಹರಿಶ್ಚಂದ್ರ’ ಎಂಬ ಚಿತ್ರ ಬಂದಿತ್ತು. ಕೆಲವು ವರ್ಷಗಳ ಹಿಂದೆ ಕಲರ್‌ನಲ್ಲಿ ಆ ಚಿತ್ರವನ್ನು ಪುನಃ ಬಿಡುಗಡೆ ಮಾಡಲಾಗಿತ್ತು. ಈಗ ಶರಣ್‌ ಸಹ “ಸತ್ಯ ಹರಿಶ್ಚಂದ್ರ’ನ ಕುರಿತು ಸಿನಿಮಾ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಹೇಳಬಹುದು. ಒಂದು ವಿಷಯ ಸ್ಪಷ್ಟವಾಗಿಬಿಡಲಿ. ಇದು ಪೌರಾಣಿಕ ಕಥೆಯೂ ಅಲ್ಲ ಮತ್ತು ಡಾ. ರಾಜಕುಮಾರ್‌ ಅವರ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವೂ ಇಲ್ಲ. ಇದೊಂದು ಸಾಮಾಜಿಕ ಕಾಮಿಡಿ ಚಿತ್ರವಾಗಿದ್ದು, ದಯಾಳ್‌ ಕಥೆ ರಚಿಸಿದ್ದಾರೆ. ಕಥೆಗೆ, “ಸತ್ಯ ಹರಿಶ್ಚಂದ್ರ’ ಎಂಬ ಟೈಟಲ್‌ ಸೂಕ್ತವಾಗಿದೆ ಎಂಬ ಕಾರಣಕ್ಕೆ ಅದೇ ಹೆಸರನ್ನು ಇಟ್ಟಿದ್ದಾರೆ.

ಸದ್ಯಕ್ಕೆ “ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಮಂಜು ನಿರ್ಮಿಸುತ್ತಿದ್ದಾರೆ, ದಯಾಳ್‌ ನಿರ್ದೇಶಿಸುತ್ತಿದ್ದಾರೆ ಮತ್ತು ಶರಣ್‌ ನಟಿಸುತ್ತಿದ್ದಾರೆ ಎಂಬ ವಿಷಯಗಳು ಬಿಟ್ಟರೆ, ಬೇರೆ ವಿಷಯಗಳು ಲಭ್ಯವಿಲ್ಲ. ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ 18ರಿಂದ ಪ್ರಾರಂಭವಾಗಲಿದೆಯಂತೆ. ನಾಯಕಿ, ಇತರೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

-ಉದಯವಾಣಿ

Comments are closed.