ಮನೋರಂಜನೆ

ಸಿಂಧು ಸಾಧನೆ ಬಗ್ಗೆ ಸಂಭ್ರಮಾಚರಣೆ ಮಾಡುವಂಥದ್ದೇನಿದೆ?ಎಂದ ಸಿನಿಮಾ ನಿರ್ದೇಶಕ

Pinterest LinkedIn Tumblr

sanal_sindhuನವದೆಹಲಿ: ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ‘ಒಳಿವು ದಿವಸತ್ತೆ ಕಳಿ’ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಫೇಸ್‍ಬುಕ್‍ನಲ್ಲಿ ಹಾಕಿದ ಪೋಸ್ಟೊಂದು ವಿವಾದ ಸೃಷ್ಟಿಸಿದೆ.

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಸಿಂಧು ಸಾಧನೆಯ ಬಗ್ಗೆ ದೇಶಕ್ಕೆ ದೇಶವೇ ಸಂಭ್ರಮಿಸುತ್ತಿರುವ ಹೊತ್ತಲ್ಲಿ, ಆಗಸ್ಟ್ 20 ರಂದು ಸನಲ್ ಕೀಳು ಅಭಿರುಚಿಯ ಪೋಸ್ಟೊಂದನ್ನು ಹಾಕಿದ್ದಾರೆ.

”ಎಲ್ಲರೂ ಸಿಂಧುವಿನ ಸಾಧನೆಯ ಬಗ್ಗೆ ಸಂಭ್ರಮಿಸುತ್ತಿದ್ದಾರೆ. ನನಗೆ ಉಗಿಯಬೇಕು ಎಂದು ಅನಿಸುತ್ತಿದೆ. ಅಷ್ಟೊಂದು ಸಂಭ್ರಮಾಚರಣೆ ಮಾಡುವಂಥದ್ದೇನಿದೆ?” ಎಂದು ಸನಲ್ ಹಾಕಿದ ಪೋಸ್ಟ್ ಗೆ ಜನರೀಗ ಕಾಮೆಂಟ್ ಮೂಲಕ ಉಗಿಯುತ್ತಿದ್ದಾರೆ.

Comments are closed.