ಮಂಗಳೂರು: ಮನುಷ್ಯ ಇತರ ಪ್ರಾಣಿಗಳಿಗಿಂತ ಸಂಪೂರ್ಣ ಭಿನ್ನ. ತನ್ನ ಗುಣದಲ್ಲಿ ಮಾತ್ರವಲ್ಲದ ದೇಹದ ಅಂಗ ರಚನೆಯಲ್ಲೂ ಇತರ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ.ನಮ್ಮ ದೇಹವು ಬಗ್ಗೆ, ಅದರ ಕಾರ್ಯ ವೈಖರಿ ಬಗ್ಗೆ ತಿಳಿಯುವುದಾದರೆ ಸಾಕಷ್ಟು ವಿಷಯಗಳಿವೆ. ಆದರೆ ಇಲ್ಲಿ ನಾವು ದೇಹದ ಬಗ್ಗೆ ಕೆಲವೊಂದು ಅಚ್ಚರಿಯ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ!
ಎರಡು ಮೆದುಳು:
ಮನುಷ್ಯನಿಗೆ ಒಂದಲ್ಲಾ ಎರಡು ಮೆದುಳು ಇದೆ. ಎರಡನೇ ಮೆದುಳು ಕರುಳಿನಲ್ಲಿದೆ. ಮನುಷ್ಯನ ದೇಹದಲ್ಲಿ ಸುಮಾರು 100 ಮಿಲಿಯನ್ ನರಗಳಿವೆ. ಅದರಲ್ಲಿ ತುಂಬಾ ನರಗಳು ಬೆನ್ನುಮೂಳೆಯಲ್ಲಿದ್ದು ಅವುಗಳು ಮೂತ್ರ ಪಿಂಡಕ್ಕೆ ಜೋಡಣೆಯಾಗಿರುತ್ತದೆ. ಇದನ್ನು ವೈಜ್ಞಾನಿಕವಾಗಿ enteric nervous system ಎಂದು ಕರೆಯಲಾಗಿದೆ. ಈ ಎರಡನೇ ಮೆದುಳಿಗೆ ಬುದ್ಧಿ ಶಕ್ತಿ ಇರುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದೇ ಕಾರಣದಿಂದ ಕೆಟ್ಟ ಅಥವಾ ಆಘಾತಕಾರಿ ಸುದ್ಧಿ ಕೇಳಿದಾಗ ಹೊಟ್ಟೆಯಲ್ಲಿ ತಳಮಳದ ಅನುಭವ ಉಂಟಾಗುವುದು
ಮನುಷ್ಯನಿಗೆ ಆಹಾರ ನುಂಗುವಾಗ ಉಸಿರಾಡಲು ಸಾಧ್ಯವಾಗುವುದಿಲ್ಲ :
ಮನುಷ್ಯನಿಗೆ ಮಾತ್ರ ಏನಾದರು ಪದಾರ್ಥಗಳನ್ನು ನುಂಗುವಾಗ ಉಸಿರಾಡುವುದಿಲ್ಲ. ಆದರೆ ಪ್ರಾಣಿಗಳು ತಿನ್ನುವಾಗ ಉಸಿರಾಡುತ್ತವೆ. ಮಗು 9 ತಿಂಗಳು ಇರುವಾಗಲೇ ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಮನುಷ್ಯನ ಧ್ವನಿ ಪೆಟ್ಟಿಗೆ ಕುತ್ತಿಗೆಯ ಕೆಳಭಾಗದಲ್ಲಿರುವುದರಿಂದ ನುಂಗುವುದು ಮತ್ತು ಉಸಿರಾಡುವ ಕ್ರಿಯೆಯನ್ನು ಜೊತೆಗೆ ಮಾಡಲು ಸಾಧ್ಯವಿಲ್ಲ.
ಮೂಗಿಗೆ ಬೆರಳು ಹಾಕುವುದು:
ನಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳು ಮೂಗಿಗೆ ಬೆರಳುಹಾಕುತ್ತಿದ್ದರೆ ಹಾಗೇ ಹಾಕಬೇಡ ಎಂದು ಬೈಯ್ಯುತ್ತೇವೆ ಅಲ್ಲವೇ? ಆದರೆ ಆ ರೀತಿ ಹಾಕುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಎಂಜಲು:
ವಾಂತಿ ಬರುವ ಬಾಯಲ್ಲಿ ಎಂಜಲು ಬರುತ್ತದೆ. ಈ ರೀತಿ ಎಂಜಲು ಬಂದಾಗ ಹೊಟ್ಟೆಯಿಂದ ವಾಂತಿಯ ಮುಖಾಂತರ ಹೊರಬರುವ ಆಮ್ಲವು ಗಂಟಲು ಮತ್ತು ಬಾಯಿಯನ್ನು ಹಾನಿ ಮಾಡದಂತೆ ಎಂಜಲು ಸಹಾಯ ಮಾಡುತ್ತದೆ.
ಒಂದು ಮೂಗಿನಲ್ಲಿ ಉಸಿರಾಟ:
ಶೇ. 85 ರಷ್ಟು ಜನರು ಮೂಗಿನಲ್ಲಿ ಮಾತ್ರ ಉಸಿರಾಡುತ್ತಾರೆ. ಎಡಭಾಗದ ಮೂಗಿನ ಹೊಳ್ಳೆಯ ಮುಖಾಂತ ಉಸಿರಾಟ 4 ಗಂಟೆಗಳ ಕಾಲ ಮಾಡಿದರೆ ಮತ್ತೆ 4 ಗಂಟೆಗಳ ಕಾಲ ಬಳಿಕ ಬಲಭಾಗದ ಮೂಗಿನಿಂದ ಉಸಿರಾಡುತ್ತೇವೆ.
ವರ್ಣ ಕುರುಡು:
ವರ್ಣ ಕುರುಡು ಮಹಿಳೆ ಮತ್ತು ಪುರುಷರಲ್ಲಿ ಕಂಡು ಬರುವ ಒಂದು ಕಾಯಿಲೆಯಾಗಿದೆ
ಸಿಹಿ ಕಹಿ:
ದೇಹದ ಯಾವುದಾದರೂ ಭಾಗಕ್ಕೆ ಗಾಯವಾದರೆ ಆ ಭಾಗಕ್ಕೆ ಸ್ವಲ್ಪ ಸಕ್ಕೆ ಸಿಂಪಡಿಸಿದರೆ ಸಾಕು ಬೇಗನೆ ಗುಣವಾಗಿ ನೋವು ಕೂಡ ಕಡಿಮೆಯಾಗುವುದು. ಆಫ್ರಿಕದವರು ಈ ಮನೆಮದ್ದನ್ನು ಪುರಾತನಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ.
ಮರೆವು:
ಮನೆಯ ಯಾವುದಾದರೂ ಕೋಣೆಗೆ ಹೋಗಿ ನಂತರ ಅಲ್ಲಿಗೆ ಏಕೆ ಬಂದೆ ಎಂಬ ವಿಷಯ ಮರೆತು ಹೋಗುವದು, ಈ ರೀತಿಯ ಅನುಭವ ಒಮ್ಮೆಯಾದರೂ ಆಗಿರಬಹುದಲ್ಲವೇ? ಕೋಣೆ ಒಳಗೆ ಬರದೆ ಬಾಗಿಲಿನಲ್ಲಿ ನಿಂತು ಏಕೆ ಬಂದೆ ಅಂತ ಯೋಚಿಸುವವರಿಗಿಂತ ಕೋಣೆ ಒಳಗೆ ಬಂದು ಯೋಚಿಸುವವರಿಗೆ ಮೂರು ಪಟ್ಟು ಅಧಿಕ ಮರೆವು ಇರುತ್ತದೆ.

Comments are closed.