ಕರಾವಳಿ

ಖದೀಮರ ಕುತಂತ್ರಕ್ಕೆ ಅಧಿಕಾರಿಗಳ ತಂತ್ರ : ಒಳ ಉಡುಪಿನಲ್ಲಿ 2 ಕೆ.ಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಸೆರೆ

Pinterest LinkedIn Tumblr

Gold_smagling_arest

ನವದೆಹಲಿ:ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನಾಭರಣ ಸ್ಮಗ್ಲಿಂಗ್ ಮಾಡಲು ಖದೀಮರು ಏನೆಲ್ಲ ತಂತ್ರ ಹೂಡುತಾರೆ. ಆದರೆ ಇವರ ತಂತ್ರಕ್ಕೆ ಪ್ರತಿತಂತ್ರ ಮಾಡ ಬಲ್ಲ ನಿಪುಣ ಅಧಿಕಾರಿಗಳು ಕರ್ತವ್ಯದಲ್ಲಿ ಇರುವವರೆಗೆ ಇಂತಹ ಖದೀಮರ ಕುತಂತ್ರ ನಡೆಯಲಾರದು ಎಂಬುವುದನ್ನು ಅಧಿಕಾರಿಗಳು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಅಧಿಕಾರಿಗಳ ಕಣ್ಣು ತಪ್ಪಿಸಿ ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ. ಜೆಟ್ ವಿಮಾನದಲ್ಲಿ ದುಬೈನಿಂದ ನವದೆಹಲಿಗೆ ತೆರಳುತ್ತಿದ್ದ ಮಹಿಳೆ ತನ್ನ ಓಳಉಡುಪಿನಲ್ಲಿ 2 ಕೆ.ಜಿ ಬಂಗಾರ ಸಾಗಿಸುತ್ತಿದ್ದಾಗ ಏರ್`ಪೋರ್ಟ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಫರ್ಹಾಟ್ ಉನ್ನಿಸಾ ಬಂಧಿತ ಮಹಿಳೆಯಾಗಿದ್ದು, ಈಕೆ ಅಡಗಿಸಿಟ್ಟುಕೊಂಡಿದ್ದ 64,38,960 ರೂ. ಮೌಲ್ಯದ ಬಂಗಾರದ ಬಿಸ್ಕೆಟ್`ಗಳನ್ನ ಏರ್ ಇಂಟೆಜೆನ್ಸ್ ಯೂನಿಟ್`ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 21ರ ರಾತ್ರಿ ಪರಿಶೀಲನೆ ವೇಳೆ ಸಂಶಯಾಸ್ಪದ ವರ್ತನೆ ತೋರಿದ ಮಹಿಳೆಯನ್ನ ವಿಮಾನದಿಂದ ಕೆಳಗಿಳಿಸಿ ತಪಾಸಣೆ ನಡೆಸಿದಾಗ ಒಳಉಡುಪಿನಲ್ಲಿ ಬಂಗಾರವನ್ನ ಅಡಗಿಸಿಟ್ಟುಕೊಂಡಿದ್ದು ಪತ್ತೆಯಾಗಿದ್ದು, ಮಹಿಳೆಯನ್ನು ಬಂಧಿಸಿರುವ ಅಧಿಕಾರಿಗಳು ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಮಹಿಳೆಯನ್ನು ಸಂಬಂಧಪಟ್ಟ ಪೊಲೀಸರಿಗೆ ಹಸ್ತಾಂತರಿಸಲಾಗಿದ್ ಎಂದು ತಿಳಿದು ಬಂದಿದೆ

Comments are closed.