ಕರಾವಳಿ

ಕ್ಷಮೆ ಕೇಳುವುದಿಲ್ಲ : ಪಾಕ್ ಪರ ತನ್ನ ಹೇಳಿಕೆ ಸಮರ್ಥಿಸಿಕೊಂಡ ರಮ್ಯಾ

Pinterest LinkedIn Tumblr

Ramya_Pak_statement

ಬೆಂಗಳೂರು, ಆಗಸ್ಟ್.23 : ಪಾಕಿಸ್ತಾನ ಬಗ್ಗೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಮ್ಯಾ ಈ ಬಗ್ಗೆ ತಾನು ಕ್ಷಮೆ ಕೇಳುವುದಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.ಪಾಕಿಸ್ತಾನ ಕುರಿತು ನಾನು ಮಾತನಾಡಿರುವುದರಲ್ಲಿ ತಪ್ಪೇನೂ ಇಲ್ಲ. ನಾನು ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

ನಾನು ಪಾಕ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರು. ಅದನ್ನು ನಾನು ಹೇಳಿದ್ದೇನೆ. ಕೆಲವರು ನನ್ನ ನಿಲುವನ್ನು ಟೀಕಿಸಿದ್ದಾರೆ. ಆದರೆ, ಅದನ್ನು ನಾನು ಪರಿಗಣಿಸುವುದಿಲ್ಲ. ನನ್ನ ಮನದ ಮಾತನ್ನು ಹೇಳಿದ್ದೇನೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಡಿಕೇರಿಯಲ್ಲಿ ನನ್ನ ವಿರುದ್ಧ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಕ್ಷಮೆ ಕೇಳುವುದೂ ಇಲ್ಲ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.