
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನ್ಖೆಯನ್ನು ಕೈಗೆತ್ತಿಕೊಂಡ ಸಿಐಡಿ ತಂಡವು ಉಡುಪಿಯಲ್ಲಿ ಬೀಡುಬಿಟ್ಟಿದ್ದು ತನಿಖೆ ನಡೆಸುತ್ತಿದೆಯಾದರೂ ಕೂಡ ಅಂತಹ ಹೇಳಿಕೊಳ್ಳಲಾಗದ ಪ್ರಗತಿ ಕಂಡುಬಾರದ ಹಿನ್ನೆಲೆ ಸಿಐಡಿ ಡಿಐಜಿ ಸೋನಿಯಾ ನಾರಂಗ್ ತಂಡ ಉಡುಪಿಗೆ ಆಗಮಿಸಿದೆ.

(ಸಿಐಡಿ ಡಿಐಜಿ ಸೋನಿಯಾ ನಾರಂಗ್)
ಭಾಸ್ಕರ್ ಶೆಟ್ಟಿ ಅವರನ್ನು ಸುಟ್ಟು ಹಾಕಲಾಗಿದೆ ಎನ್ನಲಾಗಿರುವ ನಂದಳಿಕೆ ನಿರಂಜನ ಭಟ್ಟನ ಮನೆಯ ಹೋಮಕುಂಡದ ಸ್ಥಳಕ್ಕೆ ಹಾಗೂ ಉಡುಪಿಯ ಶಿರಿಬೀಡು ಟವರ್ಸ್ ಮುಂಭಾಗದಲ್ಲಿದ್ದ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್‌ಗೆ ಸಿಐಡಿ ಎಸ್‌ಪಿ ರಾಜಪ್ಪ ಅವಧಿರೊಂದಿಗೆ ಡಿಐಜಿ ಸೋನಿಯಾ ನಾರಂಗ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲಿನಲ್ಲಿದ್ದ ಭಾಸ್ಕರ್ ಶೆಟ್ಟಿಯವರ ಆಫಿಸ್ ರೂಂ ಮೊದಲಾದೆಡೆಯೂ, ಅಲ್ಲಿಗೆ ಡಿಐಜಿಯವರ ತಂಡ ಭೇಟಿ ನೀಡಿದೆ.
ವಿವಿಧ ಆಯಾಮಗಳಲ್ಲಿ ಸಿಐಡಿ ತಂಡ ತನಿಖೆ ನಡೆಸುತ್ತಿದ್ದು ಸುಪಾರಿ ಕಿಲ್ಲರ್ಸ್ ನಡೆಸಿದ ಕೊಲೆಯೆಂಬುದರ ಬಗ್ಗೆಯೂ ತನಿಖೆ ಕೈಗೊಂಡಿದೆ. ಖಡಕ್ ಹಾಗೂ ದಕ್ಷ ಅಧಿಕಾರಿಯೆಂದೇ ಖ್ಯಾತರಾದ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರೇ ಪ್ರಕರಣದ ಬಗ್ಗೆ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತಿರುವ ಕಾರಣ ಶೀಘ್ರವೇ ಭಾಸ್ಕರ್ ಶೆಟ್ಟಿ ಮರ್ಡರ್ ಕೇಸ್ ಒಂದು ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Comments are closed.