ಮಂಗಳೂರು: ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಅವಳಿ ಸಹೋದರ ಅಥವಾ ಅವಳಿ ಸಹೋದರಿ ಇರುವ ವ್ಯಕ್ತಿಗಳು ಒಂಟಿ ಮಕ್ಕಳಾಗಿ ದೊಡ್ಡವರಾದ ಮಕ್ಕಳಿಗಿಂತ ಹೆಚ್ಚು ಆಯಸ್ಸು ಹೊಂದಿರುತ್ತಾರೆ ಎಂದು ಕಂಡುಬಂದಿದೆ. ಅಲ್ಲದೇ ಹುಟ್ಟುವಾಗ ಮತ್ತು ಇಡಿಯ ಜೀವಮಾನದವರೆಗೂ ಸಾವಿಗೀಡಾಗುವ ಸಂಭವ ಇತರರಿಗಿಂತ ಕಡಿಮೆಯಾಗಿದೆ.
ಈ ಬಗ್ಗೆ ಸಂಶೋಧನೆ ನಡೆಸಿದ ತಜ್ಞರು ಅವಳಿಗಳು ಸಾಮಾನ್ಯವಾಗಿ ತಮ್ಮೆಲ್ಲಾ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಇತರರಿಗಿಂತ ಹೆಚ್ಚು ನಿರಾಳರಾಗಿರುತ್ತಾರೆ ಎಂದು ಕಂಡುಕೊಂಡಿದ್ದಾರೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಈ ವಿಷಯದ ಮೇಲೆ ಬರೆದ ಪುಸ್ತಕದ ಪ್ರಮುಖ ಲೇಖಕರಾದ ಡೇವಿಡ್ ಶಾರೋರವರ ಪ್ರಕಾರ ತದ್ರೂಪಿ ಅವಳಿಗಳು ತದ್ರೂಪಿಯಲ್ಲದ ಅವಳಿಗಳಿಗಿಂತಲೂ, ಎಲ್ಲಾ ವಯಸ್ಸುಗಳಲ್ಲಿಯೂ ಇತರರಿಗಿಂತ ಹೆಚ್ಚು ಆಯಸ್ಸು ಹೊಂದಿರುತ್ತಾರೆ ಹಾಗೂ ತದ್ರೂಪಿಗಳಲ್ಲದ ಅವಳಿಗಳು ಇತರರಿಂಗ ಹೆಚ್ಚು ಆದರೆ ತದ್ರೂಪಿ ಅವಳಿಗಳಿಗಿಂತ ಕೊಂಚ ಕಡಿಮೆ ಆಯಸ್ಸುಹೊಂದಿರುತ್ತಾರೆ.
ಈ ವಿಷಯವನ್ನು ಅವಳಿಗಳ ಬಗ್ಗೆ ಬಹಳ ಹಿಂದಿನಿಂದ ಸಂಶೋಧನೆ ನಡೆಸುತ್ತಾ ಬಂದಿರುವ ಡೆನ್ಮಾರ್ಕ್ ನ ಡ್ಯಾನಿಶ್ ಟ್ವಿನ್ ರೆಜಿಸ್ಟ್ರಿ ಎಂಬ ಸಂಸ್ಥೆ ಬಹಿರಂಗಪಡಿಸಿದೆ.
1870 ಮತ್ತು 1900 ರ ನಡುವೆ ಡೆನ್ಮಾರ್ಕ್ ನಲ್ಲಿ ಹುಟ್ಟಿದ, ಹತ್ತು ವರ್ಷ ವಯಸ್ಸು ದಾಟಿದ 2,932 ತದ್ರೂಪಿ ಜೋಡಿ, ಮತ್ತು ಸಮಾನವಾದ ಲಿಂಗದ ಮಕ್ಕಳ ಆರೋಗ್ಯವನ್ನು ಗಮನಿಸಿ ಹಲವು ಅಂಕಿ ಅಂಶಗಳನ್ನು ಕಲೆಹಾಕಲಾಯಿತು.
ಬಳಿಕ ಈ ಮಕ್ಕಳು ದೊಡ್ಡವರಾಗಿ ತಮ್ಮ ಜೀವನವನ್ನು ಸವೆಸಿ ಇಹಲೋಕ ತ್ಯಜಿಸುವವರೆಗೂ ಅವರ ಆರೋಗ್ಯ ಮತ್ತು ಭಾವನಾತ್ಮಕ ಜೀವನದ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸುತ್ತಾ ಬರಲಾಯಿತು. ಈ ಅಂಕಿ ಅಂಶಗಳನ್ನು ಡೆನ್ಮಾರ್ಕ್ನ ಸಾಮಾನ್ಯ ಜನತೆಯ ಅಂಕಿ ಅಂಶಗಳ ಜೊತೆಗೆ ಹೋಲಿಸಿ ನೋಡಿದಾಗ ಕೆಲವು ರೋಚಕ ಸಂಗತಿಗಳು ಕಂಡುಬಂದವು.
1940ರ ವೇಳೆಗೆ ಕಂಡುಬಂದ ಈ ಮಾಹಿತಿಗಳ ಪ್ರಕಾರ ಪುರುಷರಿಗೆ ಅವಳಿ ಸಹೋದರನೊಬ್ಬ ಇದ್ದರೆ ಅವರ ಜೀವನ ಹೆಚ್ಚು ಸಂತೋಷಕರ ಹಾಗೂ ಆರೋಗ್ಯ ಇತರಿಗಿಂತ ಹೆಚ್ಚು ಉತ್ತಮವಾಗಿರುವುದು ಕಂಡುಬಂದಿತ್ತು.
ಇದರ ವ್ಯತ್ಯಾಸ ಆರು ಶೇಖಡಾದಷ್ಟು ಸ್ಪಷ್ಟವಾಗಿತ್ತು. ಅಂದರೆ ನೂರು ಸಾಮಾನ್ಯ ಜನರಲ್ಲಿ 84 ಜನರು ತಮ್ಮ ನಲವತ್ತೈದನೇ ವಯಸ್ಸಿನಲ್ಲಿ ಜೀವಂತವಾಗಿದ್ದರೆ ಅವಳಿಗಳಲ್ಲಿ ಅದು 90 ಇತ್ತು.
ಇದೇ ಪ್ರಕಾರ ಮಹಿಳೆಯರಲ್ಲಿ ಹೆಚ್ಚಿನ ಸಾವುಗಳು ಅವರ ಅರವತ್ತನೇ ವಯಸ್ಸಿನ ಪ್ರಾರಂಭಿಕ ವರ್ಷಗಳಲ್ಲಿ ಕಂಡುಬಂದರೆ ಇತರರು ಐವತ್ತೊಂದನೆಯ ವಯಸ್ಸಿನಲ್ಲಿ ಹೆಚ್ಚು ಸಾವಿಗೀಡಾಗುತ್ತಿದ್ದರು. ಅಂದರೆ ಶೇಖಡಾ ಹತ್ತರಷ್ಟು ಹೆಚ್ಚು ವ್ಯತ್ಯಾಸ ದಾಖಲಾಗಿತ್ತು.
ಈ ವ್ಯತ್ಯಾಸಕ್ಕೆ ಮತ್ತು ಅವಳಿಗಳು ಹೊಂದಿರುವ ಉತ್ತಮ ಆರೋಗ್ಯಕ್ಕೆ ಅವರ ಪರಸ್ಪರ ಸಹಬಾಳ್ವೆ, ಮಾಹಿತಿ ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಬಾಂಧವ್ಯವೇ ಕಾರಣವಾಗಿದೆ ಎಂದು ಲೇಖಕ ಶಾರೋರವರು ಅಭಿಪ್ರಾಯಪಡುತ್ತಾರೆ. ಅಂದರೆ ಉತ್ತಮ ಆಯಸ್ಸು ಪಡೆಯಲು ಸಾಮಾಜಿಕ ಒಡನಾಟ ಮತ್ತು ಸಹಯೋಗ ಅತ್ಯಂತ ಅಗತ್ಯವಾಗಿದೆ. ಇದಕ್ಕೆ ಅತ್ಯಂತ ಪ್ರಮುಖ ಕಾರಣರು ಎಂದರೆ ಸ್ನೇಹಿತರು ಮತ್ತು ಬಂಧುಗಳು.
ಸ್ನೇಹಿತರ ಒಡನಾಟದಲ್ಲಿ ನಡೆಸುವ ಚಟುವಟಿಕೆಗಳ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತಾ ಹೋಗುತ್ತದೆ. ಒಂದು ವೇಳೆ ಕೆಟ್ಟ ಅಭ್ಯಾಸಗಳನ್ನು ಬಿಡಲು ಇಚ್ಛಿಸಿದಾಗ ಸ್ನೇಹಿತರು ನೀಡುವ ಪ್ರೇರಣೆ ಮತ್ತು ಪ್ರೋತ್ಸಾಹ ನೆರವಿಗೆ ಬರುತ್ತವೆ.
ದುಃಖದ ಸಮಯದಲ್ಲಿ ಸ್ನೇಹಿತರು ಅಥವಾ ಬಂಧುಗಳು ನೀಡುವ ಆಸರೆ, ಅನಾರೋಗ್ಯದ ಸಮಯದಲ್ಲಿ ನೀಡುವ ಕಾಳಜಿ, ಯಾವುದೇ ಸಹಾಯಕ್ಕೆ ಕರೆದರೂ ಬರಲು ನಾನಿದ್ದೇನೆ ಎಂದು ಯಾರಾದರೊಬ್ಬರಿದ್ದರೆ ಇದು ಆರೋಗ್ಯ ವೃದ್ದಿಗೆ ಪೂರಕವಾಗಿದೆ ಎಂದು ಅವರು ತಿಳಿಸುತ್ತಾರೆ.
ಸಮಾಜದಲ್ಲಿ ನಿಮಗೆ ಆಪ್ತರು ಯಾರಾದರೂ ಇದ್ದು ನಿಮ್ಮ ಬಗ್ಗೆ ಕಾಳಜಿ ವಹಿಸುವಂತಹವರಾಗಿದ್ದರೆ ಇದು ಒಂದು ನಿಜವಾದ ಐಶ್ವರ್ಯವಾಗಿದ್ದು ಇದರಿಂದ ಭಾವನಾತ್ಮಕವಾಗಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸುತ್ತಾರೆ.
ಸಾಮಾನ್ಯವಾಗಿ ಅವಳಿ ಮಕ್ಕಳು ಅತಿಹೆಚ್ಚು ಆಪ್ತರಾಗಿರುವ ಕಾರಣ ಇವರ ಆರೋಗ್ಯವೂ ಇತರರಿಗಿಂತ ಸ್ವಾಭಾವಿಕವಾಗಿಯೇ ಹೆಚ್ಚಾಗಿದೆ.
ಅವಳಿ ಮಕ್ಕಳ ಕುರಿತ ರಹಸ್ಯಗಳು:
ಅವಳಿ ಮಕ್ಕಳು ಇತರರಿಗಿಂತ ವಿಭಿನ್ನವಾಗಿದ್ದು ಕೌತುಕಮಯರಾಗಿರುತ್ತಾರೆ. ಹೆಚ್ಚಿನವರ ಪಾಲಿಗೆ ಈ ಅವಳಿ ಮಕ್ಕಳು ಕುತೂಹಲವನ್ನುಂಟು ಮಾಡುವವರು ಹಾಗೂ ನಿಗೂಢಪ್ರಾಯರಾಗಿರುತ್ತಾರೆ. ಅವಳಿ ಮಕ್ಕಳ ಕುರಿತು ಜನರಲ್ಲಿ ಹಲವಾರು ಕಾಲ್ಪನಿಕ ಅನಿಸಿಕೆ, ಅಭಿಪ್ರಾಯಗಳಿರುತ್ತವೆ. ನಾವೀಗ, ಅವಳಿ ಮಕ್ಕಳ ಕುರಿತ ಈ ರಹಸ್ಯಗಳು ಮತ್ತು ತಪ್ಪು ತಿಳುವಳಿಕೆಗಳ ಕುರಿತು ವಿಮರ್ಶಿಸೋಣ ಹಾಗೂ ಅವುಗಳನ್ನು ಉತ್ತರಿಸೋಣ.
1.ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ತದ್ರೂಪಿ ಅವಳಿಗಳಾಗಲು ಸಾಧ್ಯವೇ ? ಇದಕ್ಕೆ ಚುಟುಕಾದ ಮತ್ತು ಸವಿಯಾದ ಉತ್ತರವು “ಇಲ್ಲ” ಎಂಬುದೇ ಆಗಿದೆ. ವಸ್ತುಸ್ಥಿತಿ ಏನೆಂದರೆ, ಜನಸಾಮಾನ್ಯರು “ತದ್ರೂಪು ಅವಳಿ” ಎಂಬ ಪದದ ಸರಿಯಾದ ತಿಳುವಳಿಕೆಯನ್ನು ಹೊಂದಿಲ್ಲ. “ಬ್ರಾತೃತ್ವ” ಅಥವಾ “ತದ್ರೂಪು” ಎಂಬ ಪದವು, ಅವಳಿಗಳು ಹೇಗೆ ರೂಪುಗೊಂಡಿವೆ ಎಂಬುದನ್ನು ವಿವರಿಸುತ್ತದೆಯೇ ಹೊರತು ಅವಳಿಗಳು ಹೇಗೆ ಕಾಣಿಸುತ್ತವೆ ಎಂಬುದನ್ನಲ್ಲ.
ತದ್ರೂಪು ಅವಳಿಗಳು (monozygotic) ಒಂದೇ ಲಿಂಗದವುಗಳಾಗಿರುತ್ತವೆ. ತದ್ರೂಪು ಅವಳಿಗಳು ಒಂದೇ ಅಂಡಾಣು ವಿನಿಂದ (zygote) ರೂಪುಗೊಳ್ಳುತ್ತವೆ. ತದ್ರೂಪು ಅವಳಿ ಮಕ್ಕಳು, ಒಂದೋ ಹೆಣ್ಣು ಮಕ್ಕಳಾಗಿರುತ್ತವೆ ಇಲ್ಲವೇ ಗಂಡು ಮಕ್ಕಳಾಗಿರುತ್ತವೆ (XX). ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿರಲು ಸಾಧ್ಯವಿಲ್ಲ.
ಈಗ ಮತ್ತೊಂದೆಡೆ, ಬ್ರಾತೃತ್ವ (ಅಥವಾ ಸಹೋದರೀಯ) ಅವಳಿಗಳು ಎರಡು ವಿಭಿನ್ನ ಅಂಡಾಣುಗಳಿಂದ ರೂಪುಗೊಂಡಿರುತ್ತವೆ. ಈ ಕಾರಣದಿಂದ, ಬ್ರಾತೃತ್ವ ಅವಳಿಗಳು ಒಂದೋ ಇಬ್ಬರೂ ಗಂಡು ಮಕ್ಕಳಾಗಿರಬಹುದು, ಇಲ್ಲವೇ ಇಬ್ಬರೂ ಹೆಣ್ಣು ಮಕ್ಕಳಾಗಿರಬಹುದು, ಅಥವಾ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿರಲೂಬಹುದು.
2.ಅವಳಿ ಮಕ್ಕಳು ವಿಭಿನ್ನ ಜನ್ಮದಿನಗಳನ್ನು ಹೊಂದಿರುವುದು ಸಾಧ್ಯವೇ ? ಅವಳಿ ಮಕ್ಕಳು, ಎರಡು ಪ್ರತ್ಯೇಕ ಮಕ್ಕಳಾಗಿದ್ದು ಒಟ್ಟಿಗೆ ಜನಿಸಿದವರಾಗಿರುತ್ತಾರೆ. ಅಂದಮಾತ್ರಕ್ಕೆ ಅವರು ಒಂದೇ ದಿನದಂದು ಹುಟ್ಟಿದವರಾಗಿರಬೇಕೆಂದೇನೂ ಇಲ್ಲ. ಕೆಲವೇ ಕ್ಷಣಗಳ ಅಂತರದಲ್ಲಿ ಅವರು ಹುಟ್ಟಿರುವ ಸಾಧ್ಯತೆಗಳೂ ಇವೆ.
3.ಅವಳಿ ಮಕ್ಕಳ ಜನನಕ್ಕೆ ಅನುವಂಶೀಯ ಅಥವಾ ಕೌಟುಂಭಿಕ ಕಾರಣಗಳೇನಾದರೂ ಇರಬಹುದೇ ? ತಾಯಿಯು ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಬಿಡುಗಡೆ ಮಾಡುವ ಜೀನ್ ಅನ್ನು ಅನುವಂಶೀಯವಾಗಿ ಪಡೆದವಳಾಗಿದ್ದು, ತನ್ಮೂಲಕ ಬ್ರಾತೃತ್ವ ಅವಳಿಗಳನ್ನು ಪಡೆದವಳಾಗಿದ್ದರೆ, ಅವಳಿ ಮಕ್ಕಳ ಜನನಕ್ಕೆ ಅನುವಂಶೀಯತೆಯೂ ಸಹ ಕಾರಣವಾಗಿರುತ್ತದೆ. ತದ್ರೂಪು ಅವಳಿಗಳು ಯಾದೃಚ್ಚಿಕವಾಗಿದ್ದು, ಇವುಗಳ ಜನನಕ್ಕೆ ಕುಟುಂಬವು ಕಾರಣವಾಗಿರುವುದಿಲ್ಲ.
4.ಅವಳಿಗಳು ರಹಸ್ಯ ಭಾಷೆಯನ್ನು ಹೊಂದಿರುತ್ತವೆಯೇ ? ಅವಳಿಗಳು ರಹಸ್ಯ ಭಾಷೆಯನ್ನು ಹಂಚಿಕೊಳ್ಳುತ್ತವೆ ಎಂಬುದು ಕೇವಲ ಕಾಲ್ಪನಿಕ. “ರಹಸ್ಯ ಭಾಷೆ ” “ಸ್ವತಂತ್ರ ಭಾಷೆ” , ಅಥವಾ “ಸಮೂಹ ಭಾಷೆ” ಇತ್ಯಾದಿ ಪದಗಳು ಅವಳಿ ಮಕ್ಕಳ ಭಾಷೆಯ ಪರಿಕಲ್ಪನೆಯನ್ನು ವಿವರಿಸುತ್ತವೆ. ಈ ಭಾಷೆಯು ಅವಳಿಗಳ ತೊದಲುವಿಕೆ, ಅಸಂಗತ ಅಥವಾ ಅನಿಯಮಿತ ಧ್ವನಿಯಾಗಿದ್ದು, ಇತರ ಎಲ್ಲಾ ಮಕ್ಕಳ ತೊದಲು ನುಡಿಯೇ ಆಗಿದ್ದು ಬೇರೇನೂ ವಿಶೇಷವಿಲ್ಲ. ಇದು ಈ ಮಕ್ಕಳ ಪರಸ್ಪರ ಸಂವಹನ ಮತ್ತು ಭಾಷಾಭಿವೃದ್ಧಿಯ ಒಂದು ಮಾರ್ಗವಾಗಿದೆ.
5.ಅವಳಿ ಮಕ್ಕಳು ಒಂದೇ ರೀತಿಯ ಬೆರಳಚ್ಚನ್ನು ಹೊಂದಿರುತ್ತಾರೆಯೇ ? ತದ್ರೂಪು ಅವಳಿಗಳ ಕುರಿತು ಹೇಳುವುದಾದರೆ ಉತ್ತರವು “ಇಲ್ಲ” ಎಂದೇ ಆಗಿದೆ. ತದ್ರೂಪು ಅವಳಿಗಳು ಒಂದೇ ತೆರನಾದ ಜೀನ್ (ವಂಶವಾಹಿ)ಗಳ ವಿನ್ಯಾಸವನ್ನು ಹೊಂದಿರುತ್ತವೆ. ಈ ಅವಳಿ ಮಕ್ಕಳ DNA ಯು ಸಿಪ್ಪೆಯೊಳಗಿನ ಏರಡು ಕಾಳುಗಳಂತೆ ಇದ್ದು, ಮೇಲ್ನೋಟಕ್ಕೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿರುವುದಿಲ್ಲ.

Comments are closed.