
ನವದೆಹಲಿ: ಬಲೂಚಿಸ್ತಾನ ನಿರಾಶ್ರಿತರು ಮತ್ತು ವಲಸಿಗರು ನಮಗೆ ನಾಯಿ ಎಂದು ಕರೆದರೂ ಪಾಕಿಸ್ತಾನಿಗಳು ಅಂತ ಮಾತ್ರ ಕರೆಯಬೇಡಿ. ಪಾಕಿಸ್ತಾನದವರು ಎನ್ನಲು ನಾಚಿಕೆಯಾಗುತ್ತದೆ ಎಂದು ಕಳೆದ ಕೆಲ ದಿನದ ಹಿಂದೆ ಭಾರತಕ್ಕೆ ಆಗಮಿಸಿದ್ದ ಬಲೂಚಿಸ್ತಾನದ ವಲಸಿಗ ಮಜ್ದಾಕ್ ದಿಲ್ಶಾನ್ ಬಲೂಚ್ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ನೋವಿನಿಂದ ಹೇಳಿದ್ದಾರೆ.
ಕೆನಡಾ ಪಾಸ್ಪೋರ್ಟ್ ಹೊಂದಿದ್ದ ಮಜ್ದಾಕ್ ಮೂಲತಃ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಜನಿಸಿದವರು. ಹೀಗಾಗಿ ನೀವು ಪಾಕಿಸ್ತಾನದವರು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ಪರೀಕ್ಷೆ ನಡೆಸುತ್ತಿರುವಾಗ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮಜ್ದಾಕ್ ರೀತಿಯ ಬಹುತೇಕ ನಿರಾಶ್ರಿತರು ಮತ್ತು ವಲಸಿಗರು ಪಾಕ್ ದಬ್ಬಾಳಿಕೆಯಿಂದ ಬೇಸತ್ತು ದೇಶ ತೊರೆದಿದ್ದಾರೆ. ಪಾಕ್ ಆಕ್ರಮಿತ ಬಲೂಚ್ ಮತ್ತು ಪಿಓಕೆ ಪರ ಧ್ವನಿ ಎತ್ತಿರುವ ಪ್ರಧಾನಿ ಮೋದಿಯವರ ನೆರವು ಕೋರಿರುವ ಈ ಪ್ರದೇಶದ ಜನ ಪಾಕಿಸ್ತಾನ ಹಲವು ವರ್ಷದಿಂದ ನಡೆಸುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡಲು ಸ್ವಾತಂತ್ರ್ಯ್ಕಾಗಿ ಹೋರಾಟ ನಡೆಸಿವೆ.
ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿಯವರು ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ ಮತ್ತು ಬಲೂಚಿಸ್ತಾನ ಜನತೆ ಅನುಭವಿಸುತ್ತಿರುವ ಯಾತನೆ ಮುಕ್ತಿಗೆ ನಮ್ಮ ಸಹಕಾರವಿದೆ ಎಂದು ಘೋಷಿಸಿದ್ದರು.
Comments are closed.